ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಗೆ ಚಾಲನೆ

ಅಗ್ನಿ, ಪೊಲೀಸ್ ಹಾಗೂ ವಿಪತ್ತಿಗೆ ಸಂಬಂಧಿಸಿದ ತುರ್ತು ಕರೆಗೆ 112 ಸಂಖ್ಯೆ
Last Updated 15 ಡಿಸೆಂಬರ್ 2020, 4:05 IST
ಅಕ್ಷರ ಗಾತ್ರ

ಮೈಸೂರು: ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ 112ಕ್ಕೆ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಸೋಮವಾರ ಇಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ, ಅಗ್ನಿ ಅವಘಡ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳಲ್ಲಿ 112ಕ್ಕೆ ಕರೆ ಮಾಡಿದರೆ ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಲಾಗುತ್ತದೆ. ಜಿಪಿಎಸ್‌ ಮೂಲಕ ಸಮೀಪದಲ್ಲಿರುವ ಗರುಡ ವಾಹನಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ಈ ಸೇವೆಗಾಗಿ 20 ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ನಗರದ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‌ಗೌಡ, ಗೀತಾ ಪ್ರಸನ್ನ ಮತ್ತು ನಗರದ ಎಲ್ಲ ವಿಭಾಗದ ಎಸಿಪಿಗಳು ಇದ್ದರು.

ಬಳಕೆ ಹೇಗೆ?

* ತುರ್ತು ಸಂದರ್ಭಗಳಲ್ಲಿ 112ಕ್ಕೆ ಕರೆ ಮಾಡಬಹುದು, ಇಲ್ಲವೇ ಎಸ್‌ಎಂಎಸ್‌ ಕಳುಹಿಸಬಹುದು

* erss112ktk@ksp.gov.in ಗೆ ಇ–ಮೇಲ್ ಮಾಡಬಹುದು

‌* ವೆಬ್‌ಸೈಟ್‌ ವಿಳಾಸ www.ka.ners.in

* ಮೊಬೈಲ್ ಆ್ಯಪ್ 112 INDIA

* ಸಾಮಾನ್ಯ ಫೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತುವ ಮೂಲಕ ಪ್ಯಾನಿಕ್ ಅಲರ್ಟ್‌ ಮಾಡಬಹುದು

* ಸ್ಮಾರ್ಟ್‌ಫೋನಿನಲ್ಲಿ 3 ಅಥವಾ 5 ಸಂಖ್ಯೆಯನ್ನು ವೇಗವಾಗಿ ಒತ್ತುವ ಮೂಲಕ ಪ್ಯಾನಿಕ್ ಅಲರ್ಟ್ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT