ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಧರ್ಮದ ಪ್ರದರ್ಶನಕ್ಕೆ ಅವಕಾಶವಿಲ್ಲ: ಎಚ್.ವಿಶ್ವನಾಥ್‌

Last Updated 9 ಫೆಬ್ರುವರಿ 2022, 9:59 IST
ಅಕ್ಷರ ಗಾತ್ರ

ಮೈಸೂರು: ‘ಶಾಲೆ ಪರಮಪೂಜಿತ ಸ್ಥಳವಾಗಿದ್ದು, ಅಲ್ಲಿ ಧರ್ಮದ ಪ್ರದರ್ಶನಕ್ಕೆ ಅವಕಾಶವಿಲ್ಲ. ಹಿಜಾಬ್‌ ಅಥವಾ ಕೇಸರಿ ಶಾಲು ಮನೆ ಹಾಗೂ ಇತರ ಕಡೆ ಪ್ರದರ್ಶಿಸಬಹುದೇ ಹೊರತು, ಶಾಲೆಗಳಲ್ಲಿ ಅಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ‘ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡು ವಿಜೃಂಭಿಸುತ್ತಿವೆ. ಕೇಸರಿ ಶಾಲು, ಹಿಜಾಬ್‌ಗಿಂತ ಶಿಕ್ಷಣ ದೊಡ್ಡದು. ಧರ್ಮದ ಲಾಂಛನ ಮನೆಗಳಿಗೆ ಸೀಮಿತವಾಗಿರಲಿ. ಅವನ್ನು ಶಾಲೆಯೊಳಗೆ ತರಬೇಡಿ’ ಎಂದು ಸಲಹೆ ನೀಡಿದರು.

‘ಬಸವರಾಜ ಬೊಮ್ಮಾಯಿ ಅವರೇ, ಯಾರೋ ಮೂರು ಜನ ಕಲ್ಲೆಸೆದ ಕಾರಣಕ್ಕೆ ಶಾಲೆ- ಕಾಲೇಜುಗಳನ್ನು ಮೂರು ದಿನ ಮುಚ್ಚಿಸುತ್ತೀರಾ? ಕಲ್ಲು ಹೊಡೆದವರನ್ನು ಒದ್ದು ಒಳಗೆ ಹಾಕಲು ನಮ್ಮಲ್ಲಿ ಕಾನೂನು ಇಲ್ಲವೇ? ಕಾನೂನಿನಡಿ ಶಿಕ್ಷಿಸುವ ಬದಲು ಶಾಲೆಗೆ ಬಾಗಿಲು ಹಾಕುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲವು ಶಾಲೆಗಳ ಆಡಳಿತ ವರ್ಗದವರು ಒಂದೊಂದು ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಿ ಈ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದರೆ, ಅಂತಹ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT