ಸೋಮವಾರ, ಅಕ್ಟೋಬರ್ 26, 2020
20 °C

ಐಪಿಎಲ್ ಬೆಟ್ಟಿಂಗ್: 8 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಐಪಿಎಲ್ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಬೆಟ್ಟಿಂಗ್‌ ನಡೆಸು ತ್ತಿದ್ದ ಎಂಟು ಮಂದಿಯನ್ನು‌ ಗುರುವಾರ ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.

ಬೆಟ್ಟಿಂಗ್‌ಗೆ ಬಳಕೆ ಮಾಡಿದ ₹ 9,810 ನಗದು, ಎಂಟು ಮೊಬೈಲ್, ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರದ ಹಾಲೂರಿನ ಗುರುಪ್ರಸಾದ್, ಮಹದೇವಪುರದ ಅರುಣ್‌, ಗಜೇಂದ್ರ, ಕೃಷ್ಣ, ಜೆ.ಪಿ.ನಗರದ ಪವನ್, ರಮಾಭಾಯಿ ನಗರದ ಮೋಹನ್, ಗೆಜ್ಜಗಳ್ಳಿಯ ವಿನೋದ್ ಹಾಗೂ ವಿನೋದ್‌ ರಾಜ್ ಬಂಧಿತ ಆರೋಪಿಗಳು.

ಆರೋಪಿಗಳು ಜೆ.ಪಿ.ನಗರದ ಕೊನೆ ಬಸ್‌ ತಂಗುದಾಣದ ಬಳಿಯ ಸಾಯಿ ಚಹಾ ಅಂಗಡಿ ಹಿಂಭಾಗ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ಮಾಡಿದ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು