ಬುಧವಾರ, ಜನವರಿ 26, 2022
25 °C

ಮೈಸೂರು ಜಿಲ್ಲಾ ಕಸಾಪ: ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡ್ಡೀಕೆರೆ ಗೋಪಾಲ್‌

ಮೈಸೂರು: ಮಡ್ಡೀಕೆರೆ ಗೋಪಾಲ್‌ ಅವರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

2008ರಿಂದ 2011ರವರೆಗೆ ಅಧ್ಯಕ್ಷರಾಗಿದ್ದ ಅವರು ಮತ್ತೊಂದು ಅವಧಿಗೆ ಜಿಲ್ಲಾ ಕಸಾಪ ಚುಕ್ಕಾಣಿ ಹಿಡಿದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಗಳು ಕಣದಲ್ಲಿದ್ದರು. ಭಾನುವಾರ ನಡೆದ ಚುನಾವಣೆಯಲ್ಲಿ ಅವರು 2,565 ಮತಗಳನ್ನು ಪಡೆದರು. 1,601 ಮತಗಳನ್ನು ಪಡೆದ ಬನ್ನೂರು ಕೆ.ರಾಜು ಎರಡನೇ ಸ್ಥಾನ‌ ಗಳಿಸಿದರು. ಕೆ.ಎಸ್‌.ನಾಗರಾಜು 1,485 ಮತಗಳನ್ನು ಪಡೆದರು.

ಜಿಲ್ಲೆಯಲ್ಲಿ ಒಟ್ಟು 13,378 ಮತದಾರರಿದ್ದು, 5,722 ಮಂದಿ ಮಾತ್ರ ಮತ ಚಲಾಯಿಸಿದ್ದರು. 71 ಮತಗಳು ತಿರಸ್ಕೃತಗೊಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು