ಮೈಸೂರು: ‘ಬೆಂಗಳೂರಿನಲ್ಲಿ ಈಚೆಗೆ ನಡೆದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೈಸೂರು ಸ್ಫೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಸ್ಪರ್ಧಿಗಳು 50ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ರವೀಂದ್ರ ಸ್ವಾಮಿ ಮಂಗಳವಾರ ಇಲ್ಲಿ ತಿಳಿಸಿದರು.

‘ರೋರಿಜ್ಸ್ಫೋರ್ಟ್ಸ್ ಶೂಟಿಂಗ್ ಚಾಂಪಿಯನ್‌ಶಿಪ್, ಅರ್ಜುನ್ ಅಂಡ್ ಗೋಲ್ಡನ್ ಹೇಸ್ ಸ್ಫೋರ್ಟ್ಸ್ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಅಕಾಡೆಮಿಯ 21 ಮಂದಿ ಶೂಟರ್‌ಗಳು ಸ್ಪರ್ಧಿಸಿ, ಪದಕ ಗೆದ್ದಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಕೃಷ್ಣ ರಾಜೇಂದ್ರ, ಅತೀಕ್ ಅಹ್ಮದ್, ಬಬನ್ ಖಾನ್, ವಸೀಮ್, ಪ್ರಜ್ಞಾ, ಹರ್ಷಿತಾ, ಚೇತನ ಓಬು ಲಕ್ಷ್ಮೀ, ಆದರ್ಶ್, ಪಿ.ಅಮೋಘ್, ರಾಹುಲ್, ಕಿಶೋರ್, ರಾಜೇಶ್, ರಿತಿಕ್, ಲಿಖಿತ್, ಸಾಗರ್ ಮಂದಣ್ಣ, ನಿಹಾಲ್, ತರುಣ್, ಸೈಯದ್ ರಜಾಕ್, ಪ್ರಣವ್, ಚಂದನ ಪದಕ ಪಡೆದವರು ಎಂದು ರವೀಂದ್ರ ಮಾಹಿತಿ ನೀಡಿದರು.

ಪದಕ ಪಡೆದ ಶೂಟರ್‌ಗಳನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.

ಮೈಸೂರು ಸ್ಫೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಕಾರ್ಯದರ್ಶಿ ವಿವೇಕ್, ಸಹ ಕಾರ್ಯದರ್ಶಿ ಉಮೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.