ಗುರುವಾರ , ಅಕ್ಟೋಬರ್ 28, 2021
19 °C

ಮೈಸೂರು ದಸರಾ: ಅರಮನೆ ಪ್ರವೇಶ ಶುಲ್ಕ ₹100ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ₹ 70ರಿಂದ 100ಕ್ಕೆ ಹೆಚ್ಚಿಸಲಾಗಿದೆ.

ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿಯೂ ಪ್ರವೇಶ ಶುಲ್ಕ ₹100 ಇರಲಿದೆ. ವಿದೇಶಿಗರಿಗೂ ಇಷ್ಟೇ ಶುಲ್ಕ ನಿಗದಿಪಡಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ₹ 50 ಶುಲ್ಕ ವಿಧಿಸಲು ಅರಮನೆ ಮಂಡಳಿ ನಿರ್ಧರಿಸಿದೆ.

‘ಕೋವಿಡ್‌ಗೆ ಮುನ್ನ ವಾರ್ಷಿಕ ₹ 17 ಕೋಟಿ ಆದಾಯ ಬರುತಿತ್ತು. ಎರಡು ವರ್ಷಗಳಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಿಲ್ಲ. ನಿರ್ವಹಣೆಗೆ ಪ್ರತಿ ತಿಂಗಳು ₹ 30 ಲಕ್ಷ ವೆಚ್ಚವಾಗುತ್ತದೆ. ಸಿಬ್ಬಂದಿ ವೇತನವನ್ನೂ ಮಂಡಳಿ ವತಿಯಿಂದಲೇ ಭರಿಸಬೇಕು. ಹಾಗೆಯೇ, ಅರಮನೆ ದೀಪಾಲಂಕಾರ ಸೇರಿ ವಿದ್ಯುತ್‌ ದರವೇ ತಿಂಗಳಿಗೆ  ₹ 10 ಲಕ್ಷ ಬರುತ್ತದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಹಿಂದೆ ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಹೆಚ್ಚು ಶುಲ್ಕ ವಿಧಿಸುತ್ತಿದ್ದೇವೆ. ಈಗ ಎಲ್ಲಾ ದಿನಗಳಲ್ಲೂ ಏಕರೂಪ ಶುಲ್ಕ ವಿಧಿಸಲಾಗುವುದು. ಪ್ರವೇಶ ಶುಲ್ಕ ಪರಿಷ್ಕರಿಸದೆ 4 ವರ್ಷಗಳಾಗಿತ್ತು’ ಎಂದರು. 

ಅರಮನೆ ಪ್ರವೇಶ ಶುಲ್ಕ (₹ ಗಳಲ್ಲಿ)

ಯಾರಿಗೆ? ಹೊಸ ದರಹಳೆಯ ದರ
ವಯಸ್ಕರು ₹100₹70
ವಿದೇಶಿಗರು ₹100₹70

 ವಾರಾಂತ್ಯ/ಸರ್ಕಾರಿ ರಜೆ ದಿನ;

ವಯಸ್ಕರು₹100₹90
ಮಕ್ಕಳು ₹50₹30
ವಿದ್ಯಾರ್ಥಿಗಳು₹30₹10

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು