ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಆರ್‌ಎಫ್‌ ಶ್ರೇಯಾಂಕ ಪಟ್ಟಿ: ಮೈಸೂರು ವಿ.ವಿಗೆ 19ನೇ ಸ್ಥಾನ

Last Updated 9 ಸೆಪ್ಟೆಂಬರ್ 2021, 15:33 IST
ಅಕ್ಷರ ಗಾತ್ರ

ಮೈಸೂರು: ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಗುರುವಾರ ಪ್ರಕಟಿಸಿದ 2021ನೇ ಸಾಲಿನ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್‌ನ (ಎನ್‌ಐಆರ್‌ಎಫ್‌) ಶ್ರೇಯಾಂಕ ಪಟ್ಟಿಯ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೈಸೂರು ವಿ.ವಿ. 19ನೇ ಸ್ಥಾನ ಪಡೆದುಕೊಂಡಿದೆ.

ವಿಶ್ವವಿದ್ಯಾಲಯಗಳು, ಐಐಟಿ, ಐಐಎಸ್‌ಸಿ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ದೇಶದ 1,657 ಶಿಕ್ಷಣ ಸಂಸ್ಥೆಗಳ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 34 ನೇ ಸ್ಥಾನ ಲಭಿಸಿದೆ.

‘ಕಳೆದ ವರ್ಷ ವಿ.ವಿಗಳ ಪಟ್ಟಿಯಲ್ಲಿ 27, ಒಟ್ಟಾರೆಯಾಗಿ 47ನೇ ಸ್ಥಾನ ದೊರೆತಿತ್ತು. ಈ ಬಾರಿ ರ‍್ಯಾಂಕಿಂಗ್‌ನಲ್ಲಿ ಇನ್ನಷ್ಟು ಸುಧಾರಣೆಯಾಗಿದೆ. ಕರ್ನಾಟಕದ ವಿ.ವಿಗಳಲ್ಲಿ ನಮಗೆ ಸತತ ಎರಡನೇ ಸಲ ಅಗ್ರಸ್ಥಾನ ದೊರೆತಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಜೆಎಸ್‌ಎಸ್‌ 56 ನೇ ಸ್ಥಾನ: ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು (ಜೆಎಸ್‌ಎಸ್‌ಎಎಚ್ಇಆರ್‌) ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 56ನೇ ಸ್ಥಾನ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT