ಭಾನುವಾರ, ಸೆಪ್ಟೆಂಬರ್ 26, 2021
28 °C
ಮೈಸೂರು ಮಂಜುನಾಥ್ ಸಂಗೀತ ಸಂಯೋಜನೆ

ಯೋಗಕ್ಕೆ ಹೊಸ ರಾಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪಿಟೀಲು ವಾದಕ ಮೈಸೂರು ಮಂಜುನಾಥ್ ಅವರು ಯೋಗಕ್ಕೆ ಸಂಬಂಧಿಸಿದಂತೆ ‘ಭರತ’ ಎಂಬ ಹೆಸರಿನ ಹೊಸ ರಾಗವನ್ನು ಸೃಷ್ಟಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶತಾವಧಾನಿ ಗಣೇಶ್‌ ಅವರು ಗೀತ ರಚನೆ ಮಾಡಿದ್ದು, ಮಂಜುನಾಥ್‌ ಸಂಗೀತ ಸಂಯೋಜನೆ ಮಾಡಿ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗ ಪ್ರಿಯರಿಗೆ ಉಡುಗೊರೆ ನೀಡಿದ್ದಾರೆ.

‘ಸಂಗೀತದ ಮೂಲಕ ಯೋಗಕ್ಕೆ ನಮನ ಸಲ್ಲಿಸುವುದು ನನ್ನ ಉದ್ದೇಶವಾಗಿದೆ. ಹೊಸ ರಾಗದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಮಂಜುನಾಥ್‌ ಹೇಳಿದರು.

‘ಸೆಂಟರ್‌ ಫಾರ್‌ ಸಾಫ್ಟ್‌ ಪವರ್‌ ಮತ್ತು ಇಂಡಿಯಾ ಫೌಂಡೇಷನ್‌ ಸಂಸ್ಥೆಗಳು ಯೋಗಕ್ಕೆ ಹೊಸ ರಾಗ ಸೃಷ್ಟಿಸುವಂತೆ ನನ್ನಲ್ಲಿ ಕೇಳಿಕೊಂಡವು. ಈಗ ಇರುವ ರಾಗ ಇರಬಾರದು. ಹೊಸ ರಾಗ ಬೇಕು ಎಂಬ ಸೂಚನೆಯನ್ನೂ ಕೊಟ್ಟಿದ್ದವು. ಅದನ್ನು ಸವಾಲಾಗಿ ಸ್ವೀಕರಿಸಿ ಹೊಸ ರಾಗ ಸೃಷ್ಟಿಸಿದ್ದೇನೆ’ ಎಂದರು.

‘ಭರತ’ ಹೆಸರಿನ ರಾಗ ಸಂಯೋಜನೆಗೆ ಮೂರು ವಾರಗಳನ್ನು ತೆಗೆದುಕೊಂಡಿದ್ದೇನೆ. ಸಂಗೀತ ತಜ್ಞ ಪ್ರವೀಣ್‌ ರಾವ್‌ ಮತ್ತು ವಿಜಯಲಕ್ಷ್ಮಿ ಅವರು ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ’ ಎಂದು ನುಡಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯುವ ಜೂನ್‌ 21 ರಂದೇ ವಿಶ್ವ ಸಂಗೀತ ದಿನಾಚರಣೆಯೂ ನಡೆಯಲಿದೆ. ಅದೇ ದಿನ ಗೀತೆಯ ಬಿಡುಗಡೆ ನಡೆಯಲಿದೆ.

20 ಸಂಗೀತಗಾರರು: ಐದು ನಿಮಿಷಗಳ ಗೀತೆಯು ಇದಾಗಿದ್ದು, ಭಾರತ ಹಾಗೂ ಯೂರೋಪಿನ ಖ್ಯಾತ ಸಂಗೀತ ವಿದ್ವಾನ್‌ಗಳು ಕೆಲಸ ಮಾಡಿದ್ದಾರೆ. ಕರ್ನಾಟಕ, ಹಿಂದೂಸ್ತಾನಿ, ಜಪಾನಿ, ಯುರೋಪಿಯನ್‌ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಹೆಸರು ಮಾಡಿರುವ ಸಂಗೀತ ತಜ್ಞರು ಕೈಜೋಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು