ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌. ಡಿ ಪದವೀಧರೆ ಡಾ.ಜಿ.ರೂಪಾ ಮೈಸೂರು ಮಹಾನಗರ ಪಾಲಿಕೆಯ ಉಪ ಮೇಯರ್‌

Last Updated 6 ಸೆಪ್ಟೆಂಬರ್ 2022, 13:24 IST
ಅಕ್ಷರ ಗಾತ್ರ

ಮೈಸೂರು: ಉಪ ಮೇಯರ್‌ ಸ್ಥಾನಕ್ಕೆ ಆಯ್ಕೆಯಾಗಿರುವ ಡಾ.ಜಿ.ರೂಪಾ ಪಿಎಚ್‌.ಡಿ ಪದವೀಧರೆ.

ವಾರ್ಡ್ ನಂ.53 (ಸಿದ್ದಾರ್ಥನಗರ) ಪ್ರತಿನಿಧಿಸುವ ರೂಪಾ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಔಷಧ ವಿಜ್ಞಾನ ವಿಷಯದಲ್ಲಿ 2021ರಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ‘ಡಿಸೈನ್ ಅಂಡ್ ಡೆವಲಪ್‌ಮೆಂಟ್ ಆಫ್ ಇನೋವೇಟಿವ್ ಓರಲ್ ಮೈಕ್ರೋ ಅಂಡ್ ನ್ಯಾನೊ ಕರ್ಕ್ಯುಮಿನ್ ವೆಕ್ಟರ್ಸ್ ಆಫ್ ನ್ಯಾಚುರಲ್‌ ಪಾಲಿಮರ್ಸ್‌ ಫಾರ್‌ ಬಯೊವಯಾಬಿಲಿಟಿ ಎನ್‌ಹ್ಯಾನ್ಸ್‌ಮೆಂಟ್’ ವಿಷಯದ ಬಗ್ಗೆ ಮಹಾಪ್ರಬಂಧ ಸಲ್ಲಿಸಿದ್ದರು.

ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ 14 ವರ್ಷಗಳವರೆಗೆ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಪತಿ ಯೋಗೇಶ್ ಬಿಜೆಪಿ ಮುಖಂಡ.

‘ಹಿಂದುಳಿದ ವರ್ಗದ ಮಹಿಳೆಯಾದ ನನಗೆ ಪಕ್ಷವು ಉಪಮೇಯರ್‌ ಸ್ಥಾನ ನೀಡಿದ್ದು ತುಂಬಾ ಸಂತಸ ನೀಡಿದೆ. ಪತಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT