ಮಂಗಳವಾರ, ಜುಲೈ 5, 2022
26 °C

ರಂಗಾಯಣದ ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ: ಕೆ.ಎಸ್.ಶಿವರಾಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬೌನ್ಸರ್ ಹೊಡೆದ ಏಟಿನಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಮೃತಪಟ್ಟಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳಿದ್ದಾರೆ. ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು ಇಲ್ಲವೇ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು. ಇಲ್ಲದಿದ್ದರೆ ರಂಗಾಯಣದ ಆವರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಅಣಕು ಶವಯಾತ್ರೆ ನಡೆಸಲಾಗುವುದು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸತ್ತವರನ್ನು ಕುರಿತು ಹೀನಾಯವಾಗಿ  ಮಾತನಾಡಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ನಾಚಿಕೆಗೇಡು.  ರಾಕೇಶ್ ಅಭಿಮಾನಿಗಳು ಕಾರ್ಯಪ್ಪ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಸಿದರು.

ಸಂಸ್ಕೃತಿ, ಶಿಸ್ತಿಗೆ ಹೆಸರಾಗಿರುವ ಆರ್ ಎಸ್ ಎಸ್ ಕೂಡಲೇ ಕಾರ್ಯಪ್ಪ ಅವರನ್ನು ನಿಯಂತ್ರಿಸಬೇಕು. ಅಸಂಸ್ಕೃತಿಯ ಹೇಳಿಕೆ ನೀಡುವ ಮೂಲಕ ಆರ್ ಎಸ್ ಎಸ್ ಗೆ ಕಾರ್ಯಪ್ಪ ಕಳಂಕ ತಂದಿದ್ದಾರೆ ಎಂದು ಹೇಳಿದರು.

ಕಾರ್ಯಪ್ಪ ಅವರು ಹಿಂದೆ ಜೈಲಿಗೆ ಹೋಗಿದ್ದು ಏಕೆ ಎಂಬುದನ್ನು ಅವರು ಬಹಿರಂಗಪಡಿಸಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕು ಎಂದರು.

ತಾಯಿ ಕುರಿತ ಬಹುರೂಪಿ ರಂಗೋತ್ಸವದಲ್ಲಿ ಹಿರೇಮಗಳೂರು ಕಣ್ಣನ್ ಮಹಿಳೆಯರನ್ನು ಕುರಿತು ಕೀಳಾಗಿ  ಮಾತನಾಡಿರುವುದು ಸರಿಯಲ್ಲ‌. ಅವರು ಅಸಹ್ಯ ತರುವ ಹಾಗೂ ಸಮಾಜವನ್ನು ಕುಲಗೆಡಿಸುವ ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಇವರು ಸಂಸ್ಕೃತಿ ಚಿಂತಕರೆ? ಎಂದು ಪ್ರಶ್ನಿಸಿದರು.

ಬೌನ್ಸರ್ ಹೊಡೆದ ಏಟಿನಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಮೃತಪಟ್ಟಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳಿದ್ದಾರೆ. ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು ಇಲ್ಲವೇ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.

ಇಲ್ಲದಿದ್ದರೆ ರಂಗಾಯಣದ ಆವರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಅಣಕು ಶವಯಾತ್ರೆ ನಡೆಸಲಾಗುವುದು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸತ್ತವರನ್ನು ಕುರಿತು ಹೀನಾಯವಾಗಿ  ಮಾತನಾಡಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ನಾಚಿಕೆಗೇಡು.  ರಾಕೇಶ್ ಅಭಿಮಾನಿಗಳು ಕಾರ್ಯಪ್ಪ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಸಿದರು.

ಸಂಸ್ಕೃತಿ, ಶಿಸ್ತಿಗೆ ಹೆಸರಾಗಿರುವ ಆರ್ ಎಸ್ ಎಸ್ ಕೂಡಲೇ ಕಾರ್ಯಪ್ಪ ಅವರನ್ನು ನಿಯಂತ್ರಿಸಬೇಕು. ಅಸಂಸ್ಕೃತಿಯ ಹೇಳಿಕೆ ನೀಡುವ ಮೂಲಕ ಆರ್ ಎಸ್ ಎಸ್ ಗೆ ಕಾರ್ಯಪ್ಪ ಕಳಂಕ ತಂದಿದ್ದಾರೆ ಎಂದು ಹೇಳಿದರು.

ಕಾರ್ಯಪ್ಪ ಅವರು ಹಿಂದೆ ಜೈಲಿಗೆ ಹೋಗಿದ್ದು ಏಕೆ ಎಂಬುದನ್ನು ಅವರು ಬಹಿರಂಗಪಡಿಸಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕು ಎಂದರು.

ತಾಯಿ ಕುರಿತ ಬಹುರೂಪಿ ರಂಗೋತ್ಸವದಲ್ಲಿ ಹಿರೇಮಗಳೂರು ಕಣ್ಣನ್ ಮಹಿಳೆಯರನ್ನು ಕುರಿತು ಕೀಳಾಗಿ  ಮಾತನಾಡಿರುವುದು ಸರಿಯಲ್ಲ‌. ಅವರು ಅಸಹ್ಯ ತರುವ ಹಾಗೂ ಸಮಾಜವನ್ನು ಕುಲಗೆಡಿಸುವ ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಇವರು ಸಂಸ್ಕೃತಿ ಚಿಂತಕರೆ? ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು