ಹಣವಿದ್ದ ಪರ್ಸ್‌ ಮರಳಿಸಿದ ಆಟೊ ಚಾಲಕ; ಸತತ ಒಂದು ವಾರ ಮನೆ ಹುಡುಕಿದ ಕಾನ್‌ಸ್ಟೆಬಲ್

ಬುಧವಾರ, ಏಪ್ರಿಲ್ 24, 2019
33 °C

ಹಣವಿದ್ದ ಪರ್ಸ್‌ ಮರಳಿಸಿದ ಆಟೊ ಚಾಲಕ; ಸತತ ಒಂದು ವಾರ ಮನೆ ಹುಡುಕಿದ ಕಾನ್‌ಸ್ಟೆಬಲ್

Published:
Updated:

ಮೈಸೂರು: ಆಟೊ ಚಾಲಕರೊಬ್ಬರು ನೀಡಿದ ಹಣ ಮತ್ತು ಎಟಿಎಂ ಕಾರ್ಡ್‌ಗಳಿದ್ದ ಪರ್ಸ್‌ನ್ನು ಸತತ ಒಂದು ವಾರಗಳ ಕಾಲ ಮನೆ ಹುಡುಕಿದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಪರ್ಸ್ ಕಳೆದುಕೊಂಡವರಿಗೆ ತಲುಪಿಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಯರಗನಹಳ್ಳಿಯ ಆಟೊ ಚಾಲಕ ಅರುಣ್ (28) ಅವರಿಗೆ ಹೆಬ್ಬಾಳದ 2ನೇ ಹಂತದ ನಿವಾಸಿ ಕೆ.ಆರ್.ರಾಕೇಶ್‌ಪ್ರಸಾದ್ ಅವರ ಪರ್ಸ್ ಸಿಕ್ಕಿತ್ತು. ಇದನ್ನು ಅವರು ಲಷ್ಕರ್ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಮುನಿಯಪ್ಪ ಅವರಿಗೆ ನೀಡಿದ್ದರು. ಪರ್ಸ್‌ನಲ್ಲಿ ₹ 2 ಸಾವಿರ ನಗದು ಹಾಗೂ ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್‌ಗಳಿದ್ದವು. ಆದರೆ, ವಿಳಾಸ ಮಾತ್ರ ಹೆಬ್ಬಾಳ ಎಂದಷ್ಟೇ ಇತ್ತು. ವಿಳಾಸ ಹುಡುಕಿ ತಲುಪಿಸುವಂತೆ ಹೆಡ್‌ಕಾನ್‌ಸ್ಟೆಬಲ್ ಪರಶಿವಮೂರ್ತಿ ಅವರಿಗೆ ನೀಡಿದರು.

‌ಚುನಾವಣಾ ಕಾರ್ಯದ ಒತ್ತಡ ನಡುವೆಯೂ ಪರಶಿವಮೂರ್ತಿ ಅವರು ಹೆಬ್ಬಾಳದಲ್ಲಿ ಸತತ ಒಂದು ವಾರ ಕಾಲ ಮನೆ ಹುಡುಕಿದ ನಂತರ ರಾಕೇಶ್‌ಪ್ರಸಾದ್ ಅವರಿಗೆ ಪರ್ಸ್‌ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !