ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೀಲ್‌ಡೌನ್‌’ ವದಂತಿ; ಖರೀದಿಗೆ ಮುಗಿಬಿದ್ದರು

Last Updated 10 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೈಸೂರು ನಗರವನ್ನು ಸೀಲ್‌ಡೌನ್‌ ಮಾಡಲಾಗುತ್ತದೆ ಎಂಬ ವದಂತಿಯಿಂದಾಗಿ, ಜನರು ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಮುಗಿಬಿದ್ದಿದ್ದರು.

ಇದರಿಂದ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಮಪೇಟೆ ಸೇರಿದಂತೆ ಬಹುತೇಕ ಕಡೆಯ ದಿನಸಿ ಅಂಗಡಿಗಳ ಮುಂದೆ ದಟ್ಟಣೆ ಹೆಚ್ಚಿತ್ತು. ಲಾಕ್‌ಡೌನ್‌ ಇರುವುದೇ ಮರೆತಂತಿತ್ತು. ಜನ ಸಂಚಾರ, ಮಧ್ಯಾಹ್ನದವರೆಗೂ ಸಹಜ ದಿನಗಳಲ್ಲಿ ಇದ್ದಂತೆಯೇ ಇತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿಯಲ್ಲಿ ನಿಂತು ಸಾಮಗ್ರಿಗಳ ಖರೀದಿಗೆ ತೊಡಗಿದ್ದರು. ಚಾಮರಾಜ ಜೋಡಿ ರಸ್ತೆಯ ಅಡುಗೆ ಎಣ್ಣೆ ಅಂಗಡಿಯ ಮುಂದೆ, ಉದ್ದನೆಯ ಸಾಲು ಕಂಡು ಬಂತು. ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಪೊಲೀಸರೂ ತಡೆಯಲಾಗಲಿಲ್ಲ.ಅಂತರ ಕಾಯ್ದುಕೊಳ್ಳುವಂತೆ ಮೈಕ್‌ ಮೂಲಕ ಸೂಚನೆ ನೀಡುವುದಷ್ಟೇ ಸಾಧ್ಯವಾಯಿತು.

ಕೊನೆಗೆ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ‘ಸೀಲ್‌ ಡೌನ್‌ ಮಾಡುವ ತೀರ್ಮಾನ ತೆಗೆದುಕೊಂಡಿಲ್ಲ. ಎಂದಿನಂತೆ ದಿನಸಿ, ಹಾಲು, ಔಷಧ, ತರಕಾರಿ ಮತ್ತು ಹಣ್ಣು ಖರೀದಿಗೆ ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT