ಗುರುವಾರ , ಆಗಸ್ಟ್ 6, 2020
24 °C

ನೇಣಿಗೆ ಶರಣಾದ ಗೃಹಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪತಿಯ ಸಾವಿನಿಂದ ಮನನೊಂದಿದ್ದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರಿನ ಜೆ.ಪಿ.ನಗರದ ನಿವಾಸಿ ಮಧುಸೂದನ್ ಎಂಬುವರ ಪತ್ನಿ ಚಾಂದಿನಿ (25) ಆತ್ಮಹತ್ಯೆ ಮಾಡಿಕೊಂಡವರು.

ಕೆಲ ದಿನಗಳ ಹಿಂದಷ್ಟೇ ಇವರ ಪತಿ ಮಧುಸೂದನ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಐದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಚಾಂದಿನಿಗೆ ಮತ್ತೊಂದು ಮದುವೆ ಮಾಡಲು ಮನೆಯವರು ಮಾತುಕತೆ ನಡೆಸುತ್ತಿದ್ದರು.

ಈ ವಿಚಾರ ಚಾಂದಿನಿಗೆ ಗೊತ್ತಾಗಿದ್ದರಿಂದ, ಪತಿಯ ನೆನಪಿನಿಂದ ಹೊರ ಬರಲಾಗದೆ ಶನಿವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾರಣ್ಯಪುರಂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.