ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ದೇಶದ ಸಾಂಸ್ಕೃತಿಕ ತಾಣವಾಗಲಿ: ಸುತ್ತೂರು ಶ್ರೀ

Last Updated 5 ಆಗಸ್ಟ್ 2020, 9:16 IST
ಅಕ್ಷರ ಗಾತ್ರ

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವು ದೇಶದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ತಮ್ಮ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿಸುತ್ತಿರುವುದು ಸಂತಸದ ಸಂಗತಿ. ಇದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿ ಎಂದು ಎಲ್ಲ ಜನರು ಕೋವಿಡ್‌ ಕಾರಣದಿಂದ ಮನೆಯಲ್ಲೇ ಇದ್ದು ಪ್ರಾರ್ಥಿಸಬೇಕು. ನಾನೂ ಇದೇ ಕಾರಣಕ್ಕೆ ಅಯೋಧ್ಯೆಗೆ ಹೋಗಲಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ರಾಮ ಈ ದೇಶದ ಮಹಾಪುರುಷರಾಗಿ, ಸಂಸ್ಕೃತಿಯ ಉತ್ತರಾಧಿಕಾರಿಯಾಗಿದ್ದವರು. ಅವರ ಜನ್ಮಸ್ಥಳದಲ್ಲಿ ಅವರ ಸ್ಮರಣೆಗಾಗಿ ನಡೆಯುವ ಕಾರ್ಯಕ್ರಮವು ದೇಶದ ಸಮಸ್ತ ಜನರ ಆಶಯವಾಗಿತ್ತು. ಸುಪ್ರೀಂಕೋರ್ಟ್‌ನ ಸರ್ವಸಮ್ಮತವಾದ ತೀರ್ಪಿನಿಂದ ಸಂತಸ, ಸಂಭ್ರಮಗಳು ಬಂದಿದೆ. ದೇಶದ ಜನರು ಮಾನಸಿಕವಾಗಿ ಸಡಗರದಲ್ಲಿ ತೊಡಗಿಸಿಕೊಂಡಿದ್ದಾರೆ.

ದೇಶವನ್ನು ರಾಮರಾಜ್ಯ ಮಾಡುವ ಕನಸನ್ನು ನನಸಾಗಿಸಲು ಅಹರ್ನಿಷಿ ತೊಡಗಿಸಿಕೊಂಡಿರುವ ನರೇಂದ್ರ ಮೋದಿ ಅವರೇ ಈ ಕಾರ್ಯ ನೆರವೇರಿಸುತ್ತಿರುವುದು ಯೋಗಾಯೋಗ ಎಂದು ಭಾವಿಸಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT