ಶನಿವಾರ, ಜನವರಿ 22, 2022
16 °C

‘ಸ್ವಚ್ಛ ಸರ್ವೇಕ್ಷಣ್–2021’; ಮೈಸೂರು ನಗರಿಗೆ ‘ಫೈವ್‌ಸ್ಟಾರ್‌’ ರೇಟಿಂಗ್ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ ಸ್ವಚ್ಛತಾ ಸಮೀಕ್ಷೆ ‘ಸ್ವಚ್ಛ ಸರ್ವೇಕ್ಷಣ್–2021’ರ ಫಲಿತಾಂಶ ಪ್ರಕಟವಾಗಿದ್ದು, ತ್ಯಾಜ್ಯ ಮುಕ್ತ ನಗರಿಗಳಿಗೆ ನೀಡುವ ‘ಫೈವ್‌ಸ್ಟಾರ್‌’ ರೇಟಿಂಗ್‌ಗೆ ಮೈಸೂರು ಪಾತ್ರವಾಗಿದೆ.

ಮಧ್ಯಮ ನಗರಗಳ (3 ರಿಂದ 10 ಲಕ್ಷ ಜನಸಂಖ್ಯೆ) ಪೈಕಿ ‘ದೇಶದ ಅತ್ಯುತ್ತಮ ಸ್ವ–ಸುಸ್ಥಿರ ನಗರ’ ಎಂಬ ಹಿರಿಮೆಯನ್ನೂ ಮೈಸೂರು ಪಡೆದುಕೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಮೈಸೂರು ಮೇಯರ್‌ ಸುನಂದಾ ಫಾಲನೇತ್ರ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ ಮತ್ತು ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌ ಅವರು ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು