ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಅಂಧತ್ವದ ದಾರಿಯಲ್ಲೇ 425ನೇ ರ‌್ಯಾಂಕ್

ಯುಪಿಎಸ್‌ಸಿ ಫಲಿತಾಂಶ: ಪಿರಿಯಾಪಟ್ಟಣದ ಮೇಘನಾ ಸಾಧನೆ
Last Updated 30 ಮೇ 2022, 14:34 IST
ಅಕ್ಷರ ಗಾತ್ರ

ಮೈಸೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕುಡಕೂರಿನ ಕೆ.ಟಿ.ಮೇಘನಾ 425ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಕಂದಾಯ ಭವನದಲ್ಲಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಅವರಿಗೆ ಶೇ 90 ಅಂಧತ್ವವಿದೆ.

ಕೆಂಗೇರಿಯಲ್ಲಿ ವಾಸವಾಗಿರುವ ಅವರು, ತಾಂಡವಮೂರ್ತಿ ಹಾಗೂ ನವನೀತಾ ದಂಪತಿ ಪುತ್ರಿ. ಬೆಂಗಳೂರಿನ ಜ್ಞಾನಬೋಧಿನಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪಿಯು, ಪದವಿಯನ್ನು ಸುರಾನಾ ಕಾಲೇಜು, ದೂರಶಿಕ್ಷಣದಲ್ಲಿ ಎಂ.ಎ ಇಂಗ್ಲಿಷ್‌ ಪದವಿ ಪಡೆದಿದ್ದಾರೆ.

‘ಎಸ್ಸೆಸ್ಸೆಲ್ಸಿ ನಂತರ ದೃಷ್ಟಿ ಕಳೆದುಕೊಂಡ ಬಳಿಕ, ಎಚ್‌ಎಸ್‌ಆರ್‌ ಲೇಔಟ್‌ನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ತರಬೇತಿ ಪಡೆದರು. ನಂತರ ಸಿಸ್ಕೋ ಕಂಪನಿ ಸೇರಿದರು. ಜೊತೆಯಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸಿದರು’ ಎಂದು ಮೇಘನಾ ತಂದೆ ಕೆ.ಎನ್‌.ತಾಂಡವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಾ.ರಾಜ್‌ಕುಮಾರ್‌ ಐಎಎಸ್‌ ಅಕಾಡೆಮಿಯಲ್ಲಿ ಗಂಗರಾವ್‌, ಯುವ ರಾಜ್‌ಕುಮಾರ್‌ ಪ್ರೋತ್ಸಾಹಿಸಿದ್ದರು. 2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲೂ 465ನೇ ರ‍್ಯಾಂಕ್‌ ಪಡೆದಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT