ಮಂಗಳವಾರ, ಜೂನ್ 28, 2022
27 °C

ಮೈಸೂರು: ಪ್ರೊ.ವಿ.ಎಂ.ಶೋಲಾಪುರ್‌ಕರ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ (ಕಾವಾ) ಮೊದಲ ಡೀನ್‌ ಹಾಗೂ ಕಲಾವಿದ ಪ್ರೊ.ವಿ.ಎಂ.ಶೋಲಾಪುರ್‌ಕರ್‌ (89) ವಯೋಸಹಜ ಕಾರಣಗಳಿಂದ ವಿ.ವಿ.ಮೊಹಲ್ಲಾದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು. 

ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಗೋಕುಲಂನ ಸ್ಮಶಾನದಲ್ಲಿ ನಡೆಯಿತು.

ವಿಜಯಪುರದಲ್ಲಿ 1931ರಲ್ಲಿ ಜನಿಸಿದ ಇವರು, ಮುಂಬೈನ ನೂತನ್ ಕಲಾಮಂದಿರ ಹಾಗೂ ಸರ್ ಜೆ.ಜೆ.ಕಲಾಶಾಲೆಯಲ್ಲಿ ಕಲಾ ಶಿಕ್ಷಣ ಪಡೆದರು. ಜೆ.ಜೆ.ಕಲಾಶಾಲೆಯಲ್ಲೇ 1957ರಿಂದ 1979ರವರೆಗೆ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಮೈಸೂರಿಗೆ ಬಂದ ಇವರು, ಕಾವಾ ಕಾಲೇಜಿನ ಮೊದಲ ಡೀನ್‌ ಆಗಿ 1982ರಿಂದ 1988ರವರೆಗೆ ಕಾರ್ಯನಿರ್ವಹಿಸಿದ್ದರು. ನಿವೃತ್ತರಾದ ಬಳಿಕ ಇಲ್ಲಿಯೇ ನೆಲೆ ನಿಂತರು.

ಚಿತ್ರಕಲೆ ಮಾತ್ರವಲ್ಲದೇ; ಮೈಸೂರಿನ ವಿಶೇಷವಾದ ಮರದ ಕಲೆಯತ್ತಲೂ ಆಕರ್ಷಿತರಾಗಿ ಹಲವು ಕಲಾಕೃತಿ ರಚಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು