ಮಂಗಳವಾರ, ಜನವರಿ 26, 2021
28 °C
ಖುಷಿಯಾದ ವಿದ್ಯಾರ್ಥಿಗಳು, ಉಡುಗೊರೆಗಳ ವಿತರಣೆ

ಮಕ್ಕಳಿಗೆ ಹೂ ನೀಡಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಪೀಪಲ್ಸ್ ಪಾರ್ಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ’ ವತಿಯಿಂದ ನವೋದಯ ಫೌಂಡೇಷನ್ ಮತ್ತು ನವೋ– ಕಾವೇರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹೂ ನೀಡಿ ಸ್ವಾಗತ ಕೋರಲಾಯಿತು.

ಡಿಡಿಪಿಐ ಪಾಂಡುರಂಗ ಅವರು ಗುಲಾಬಿ ಹೂ ನೀಡಿ ಸಾಲಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು. ಕೋವಿಡ್ ಭಯವನ್ನು ಬಿಟ್ಟು, ನಿರ್ಭಯವಾಗಿ ಪಾಠ ಆಲಿಸುವಂತೆ ಕಿವಿಮಾತು ಹೇಳಿದರು. ಶಾಲೆಯ ಶಿಕ್ಷಕರು ಈಗಾಗಲೇ ಅಗತ್ಯ ಇರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಧೈರ್ಯ ತುಂಬಿದರು.

ಮಕ್ಕಳೂ ನಗುನಗುತ್ತ ಶಾಲಾ ಆವರಣವನ್ನು ಪ್ರವೇಶಿಸಿ, ಶಿಕ್ಷಕರಿಗೆ ವಂದಿಸಿದರು. ತಮ್ಮ ತಮ್ಮ ಬ್ಯಾಗುಗಳನ್ನು ಅಂಗಳದಲ್ಲಿ ಇಟ್ಟು, ಮರದ ನೆರಳಿನಲ್ಲಿ ವಿದ್ಯಾಗಮ ತರಗತಿಗೆ ಕಿವಿಗೊಟ್ಟರು. 9ನೇ ತರಗತಿ ವಿದ್ಯಾರ್ಥಿಗಳು ಬಯಲು ರಂಗದ ಮಂದಿರದ ವೇದಿಕೆಯಲ್ಲಿ ಆಸೀನರಾಗಿ ಪಾಠ ಕೇಳಿ ಸಂಭ್ರಮಿಸಿದರು.

ಶಿಕ್ಷಕರೊಂದಿಗೆ ಮಾತನಾಡಿದ ಅವರು, ‘ಸೋಮವಾರದವರೆಗೂ ಯಾವ ಯಾವ ವಿದ್ಯಾರ್ಥಿಗಳು ಶಾಲೆಗೆ ಬಂದಿರುವುದಿಲ್ಲವೋ ಆ ವಿದ್ಯಾರ್ಥಿಗಳ ಮನೆಗೆ ಹೋಗಿ ಪೋಷಕರ ಮನವೊಲಿಸುವ ಕಾರ್ಯ ಮಾಡಬೇಕು. ಕೇವಲ ಒಬ್ಬರೇ ಶಿಕ್ಷಕರು ಹೋದರೆ ಸಾಕಾಗುವುದಿಲ್ಲ. ಕನಿಷ್ಠ ಇಬ್ಬರು ಶಿಕ್ಷಕರಾದರೂ ಮನೆಗೆ ಹೋಗಿ ಪೋಷಕರಿಗೆ ಧೈರ್ಯ ತುಂಬಿ ಮಕ್ಕಳನ್ನು ಶಾಲೆಗೆ ಕರೆತರಬೇಕು’ ಎಂದು ಸೂಚನೆ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತವಾಗಿ ‘ಪ್ರಜಾವಾಣಿ’ ದಿನಪತ್ರಿಕೆಯನ್ನು ಹಂಚಲಾಯಿತು. ನಂತರ, ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಲಾಯಿತು. ನವೋದಯ ಫೌಂಡೇಷನ್ನಿನ ಅಧ್ಯಕ್ಷ ಡಾ.ರವಿ, ಮ್ಯಾನೇಜಿಂಗ್ ಟ್ರಸ್ಟಿ ಪ್ರಿಯದರ್ಶಿನಿ, ಕಾರ್ಯದರ್ಶಿ ಶ್ವೇತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.