ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಡಿ.ಕೋಟೆ | ಕುಸಿದ ತಂಬಾಕು ಬ್ಯಾರನ್

Published 8 ಆಗಸ್ಟ್ 2024, 16:07 IST
Last Updated 8 ಆಗಸ್ಟ್ 2024, 16:07 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಸತತವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ತಂಬಾಕು ಬ್ಯಾರನ್ ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಕೆಲಸ ಮಾಡುತ್ತಿದ್ದ ರೈತರು ಅಪಾಯವಿಲ್ಲದೇ ಪಾರಾಗಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಶಿವಲಿಂಗೇಗೌಡರಿಗೆ ಸೇರಿದ ಬ್ಯಾರನ್ ಕುಸಿದು ಬಿದ್ದಿದೆ.

ಹೊಗೆ ಸೊಪ್ಪು ಹದ ಮಾಡುವ ಸಂದರ್ಭದಲ್ಲಿಯೇ ಕುಸಿದು ಬಿದ್ದಿದ್ದು, ಮುಂದೇನು ಮಾಡಬೇಕೆಂದು ತೋಚದೆ ರೈತ ಶಿವಲಿಂಗೇಗೌಡ ಮತ್ತು ಕುಟುಂಬದವರು ಸಂಕಷ್ಟ ಎದುರಿಸುತ್ತಿದ್ದಾರೆ. ವಿವಿಧ ಬ್ಯಾಂಕ್‌ಗಳು ಮತ್ತು ಕೈ ಸಾಲ ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡಿದ್ದು, ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದ ಶಿವಲಿಂಗೇಗೌಡರಿಗೆ ಸೇರಿದ ತಂಬಾಕು ಬ್ಯಾರನ್ ಕುಸಿದು ಬಿದ್ದಿರುವುದು.
ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದ ಶಿವಲಿಂಗೇಗೌಡರಿಗೆ ಸೇರಿದ ತಂಬಾಕು ಬ್ಯಾರನ್ ಕುಸಿದು ಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT