ನಂದೀಕರ್ ನಾಟಕೋತ್ಸವದ ಮಾದರಿ
‘ರಂಗಾಯಣವು ನಾಟಕೋತ್ಸವವನ್ನು ಹಮ್ಮಿಕೊಳ್ಳುವ ಕಾಲಕ್ಕೆ, ಕೋಲ್ಕತ್ತದ ನಂದೀಕರ್ ತಂಡವು ಹಮ್ಮಿಕೊಳ್ಳುತ್ತಿದ್ದ ರಾಷ್ಟ್ರೀಯ ನಾಟಕೋತ್ಸವದ ಮಾದರಿ ಇತ್ತು’ ಎಂದು ಸ್ಮರಿಸುತ್ತಾರೆ ರಂಗಕರ್ಮಿ ಪ್ರಸನ್ನ. 80ರ ದಶಕದಿಂದಲೇ ದೇಶದಲ್ಲಿ ರಾಷ್ಟ್ರೀಯ ನಾಟಕೋತ್ಸವದ ಪರಂಪರೆಯನ್ನು ಆರಂಭಿಸಿದ ನಂದೀಕರ್ ತಂಡವು ಸಾಂಸ್ಕೃತಿಕ ಐಕ್ಯತೆಯನ್ನು ಮೂಡಿಸುವ ಮತ್ತು ದೇಶದಾದ್ಯಂತ ಇರುವ ರಂಗಕರ್ಮಿಗಳ ನಡುವೆ ಸಂವಾದವನ್ನು ಏರ್ಪಡಿಸುವ ಮಹತ್ವದ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಾಟಕೋತ್ಸವ ನಡೆಯುತ್ತದೆ.