ಮೈಸೂರು: ‘ಸಮರ್ಪಕ ದಾಖಲೆ ಇರುವ ಜಮೀನು ಖರೀದಿಸಿದ್ದರೂ, ಕೆಲವರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಎಚ್.ಎಸ್.ಶೋಭಾ, ವಿ.ಸುಚಿತ್ರಾ ದೂರಿದರು.

‘ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಭುಗತಹಳ್ಳಿ ಗ್ರಾಮದಲ್ಲಿ ನಾವು ಜಮೀನು ಖರೀದಿಸಿದ್ದೇವೆ. ಈ ಜಮೀನಿಗೆ ಸಂಬಂಧಿಸಿದ ಯಾವೊಂದು ತಕರಾರು ಇಲ್ಲ. ಆದರೂ ಕೆಲವರು ದುರುದ್ದೇಶದಿಂದ ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಇಬ್ಬರೂ ನಗರದಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಒಂದು ವರ್ಷದಿಂದಲೂ ಕ್ರಯದಾರರಾದ ನಮಗೆ ಮಾನಸಿಕ ಕಿರುಕುಳ ನೀಡುವ ಜೊತೆಗೆ, ಜಮೀನಿನ ಅಭಿವೃದ್ಧಿಗೂ ಆಸ್ಪದ ಕೊಡುತ್ತಿಲ್ಲ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡಿ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.