ತಿ.ನರಸೀಪುರ: ಬನ್ನೂರು ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಇಲ್ಲಿಗೆ ಸಮೀಪದ ಮಾಕನಹಳ್ಳಿಯಲ್ಲಿರುವ ಹೆಗ್ಗೆರೆಯ ಕೋಡಿ ಒಡೆದು ಹೋಗಿದ್ದು, ನೀರಿನ ರಭಸಕ್ಕೆ ಪೈಪ್ ಕೊಚ್ಚಿ ಹೋಗಿದೆ. ಸಂಪರ್ಕ ರಸ್ತೆ ಬಿರುಕು ಬಿಟ್ಟಿದೆ.

ಮಳೆಯಿಂದ ಹೆಗ್ಗೆರೆ ತುಂಬಿ ಹರಿದಿದ್ದು, ನೀರಿನ ಹೊರವು ಹೆಚ್ಚಾಗಿದ್ದರಿಂದ ನಾಲೆಗಳಿಗೆ ಸಂಪರ್ಕ ನೀಡಿದ್ದ ಪೈಪ್ ಕೊಚ್ಚಿ ಹೋಗಿ ರಸ್ತೆಯು ಬಿರುಕು ಬಿಟ್ಟಿದೆ. ಬೀಡನಹಳ್ಳಿಯಿಂದ ಮಾಕನಹಳ್ಳಿಗೆ ಸಂಪರ್ಕ ರಸ್ತೆಯು ಹಾಳಾಗಿದೆ ಮಾರ್ಗ ಈಗ ಬಂದ್ ಆಗಿದೆ.

ವಿಷಯ ತಿಳಿದ ಬಳಿಕ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್ ಮಾತನಾಡಿ, ‘ಕೋಡಿ ದುರಸ್ತಿಗೊಳಿಸಿ ರೈತರ ಸಮಸ್ಯೆಯನ್ನು ಪರಿಹರಿಸಲಾಗುವುದು’ ಎಂದು ತಿಳಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಹಿತ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.