ಮೈಸೂರು: ಚಾಮುಂಡಿ ಬೆಟ್ಟದ ಪೂರ್ವ ಭಾಗದಲ್ಲಿನ ಸುಂದರ ಕೆರೆಯಾದ ‘ಯಾಂದಳ್ಳಿ ಕೆರೆ’ ಮಳೆಗಾಲದಲ್ಲೂ ತುಂಬದು. ಆದರೆ, ಜೀವವೈವಿಧ್ಯದ ಪಾತ್ರೆಯಾಗಿರುವ ಕೆರೆ ಒಡಲಿನ ಸುತ್ತ ಬಡಾವಣೆಗಳು ಚಾಚುತ್ತಿವೆ.

ನವಿಲು, ಬಣ್ಣದ ಕೊಕ್ಕರೆ, ಬೂದು ಸಿಪಿಲೆ, ಹಾವಕ್ಕಿ, ಕಪ್ಪು ತಲೆಯ ಕೆಂಬರಲು, ಮರಳು ಪೀಪಿ, ಗೌಜಲಕ್ಕಿ, ನೀಲಗಿರಿ ಕಾಡು ಪಾರಿವಾಳ, ನೀರು ನಡಿಗೆ ಹಕ್ಕಿಗಳು ಸೇರಿದಂತೆ ವಿವಿಧ ಹಕ್ಕಿಗಳು ಇಲ್ಲಿ ಕಾಣಸಿಗುತ್ತವೆ. ಅವುಗಳಿಗೆ ಸಾಕು ಬಾತುಕೋಳಿಗಳ ಹಾವಳಿಯೂ ತಟ್ಟಿದೆ.

ನೈದಿಲೆ, ತಾವರೆಗಳು ಕೆರೆಯನ್ನು ತುಂಬಿದ್ದು, ಚರಂಡಿ ನೀರು ಇನ್ನೂ ಸೇರುತ್ತಿಲ್ಲ. ಮೇಲಿನ ಕೆರೆಗಳಿಂದ ನೇರ ಸಂಪರ್ಕವೂ ಇಲ್ಲದ್ದರಿಂದ ಕೆರೆಯ ನೀರು ತಿಳಿಯಾಗಿದೆ. ಆದರೆ, ಪಶ್ಚಿಮ ಭಾಗದ ಕೆರೆಯಂಚಿನವರೆಗೂ ಬಡಾವಣೆ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿಂದ ಸಣ್ಣ ಪ್ರಮಾಣದಲ್ಲಿ ಚರಂಡಿ ನೀರು ಸೇರುತ್ತಿದೆ.

ಉದ್ಯಾನ ನಿರ್ಮಿಸಲಾಗಿದ್ದರೂ, ಕೆರೆಯಂಚಿನಲ್ಲಿ ಬಡಾವಣೆ ಅಭಿವೃದ್ಧಿ ಮಾಡಿದವರು ಬಾತುಕೋಳಿ ಕೃಷಿ ಮಾಡುತ್ತಿದ್ದಾರೆ. ಬಾತುಕೋಳಿಗಳ ಪಂಜರಗಳನ್ನು ಕೆರೆಯಂಚಿನಲ್ಲಿಯೇ ಇಟ್ಟಿದ್ದಾರೆ. ಬಾತುಗಳು ಸ್ವಚ್ಛಂದವಾಗಿ ಕೆರೆಯೊಳಗೆ ವಿಹರಿಸುತ್ತಿರುವ ನೀರು ಹಕ್ಕಿಗಳಿಗೆ ತೊಂದರೆ ಉಂಟು ಮಾಡುತ್ತಿವೆ. ಕೆರೆಗೆ ಬಿಟ್ಟು ಮೇಯಿಸಲಾಗುತ್ತಿದೆ.

ಶತಮಾನದ ಇತಿಹಾಸ:

ಕೆರೆಯು ಯಾಂದಳ್ಳಿ ಗ್ರಾಮದ ಸರ್ವೆ ಸಂಖ್ಯೆ 63ರಲ್ಲಿದ್ದು, 11.36 ಎಕರೆ ವಿಸ್ತೀರ್ಣ ಹೊಂದಿದೆ. ಶತಮಾನದಷ್ಟೂ ಹಳೆಯದಾದ ಕೆರೆಯ ನೀರಿನ ಮಟ್ಟ ಅಳೆಯುವ ಕಲ್ಲುಕಂಬಗಳು ಇದ್ದು, ಸುಂದರವಾಗಿವೆ. ಕೆರೆಯ ಪೂರ್ವ ಭಾಗಕ್ಕೆ ಏರಿ ಇದೆ.

ಒಂದು ಕಾಲದಲ್ಲಿ ಜನ– ಜಾನುವಾರಿಗೆ ಕುಡಿಯಲು ಹಾಗೂ ಸ್ವಲ್ಪ ಪ್ರಮಾಣದಲ್ಲಿ ನೀರಾವರಿಗೆ ಬಳಕೆಯಾಗುತ್ತಿತ್ತು. ಕೆರೆಯ ಕೆಳಭಾಗದಲ್ಲೂ ಬಡಾವಣೆ ಎದ್ದಿದ್ದು, ಹಳ್ಳದ ಭಾಗದಲ್ಲಿಯೇ ರಸ್ತೆಗಳನ್ನು ಮಾಡಲಾಗಿದೆ.

ಬಾರದ ರಾಜಕಾಲುವೆ ನೀರು:

‘ಚಾಮುಂಡಿ ಬೆಟ್ಟದಲ್ಲಿ ಬಿದ್ದ ನೀರು ಸಾತಿ ಕೆರೆ ಮೂಲಕ ತಿಪ್ಪಯ್ಯನಕೆರೆ ಸೇರುತ್ತದೆ. ಅಲ್ಲಿಂದ ವರುಣ ಕೆರೆಗೆ ರಾಜಕಾಲುವೆ ಇದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ ನಿರ್ಮಾಣವಾದ ನಂತರ ರಾಜಕಾಲುವೆಯ ಒತ್ತುವರಿ ನಡೆದಿದೆ. ಈ ರಾಜಕಾಲುವೆ ಚಿಕ್ಕಹಳ್ಳಿ ಬಳಿಯಿಂದ ಯಾಂದಳ್ಳಿ ಕೆರೆಯತ್ತ ಹರಿದುಬರುತ್ತಿತ್ತು. ವರುಣ ಕಾಲುವೆ ನಿರ್ಮಾಣದ ನಂತರ ಕೆರೆಗೆ ನೀರ ಹರಿವು ಇಲ್ಲವಾಗಿದೆ’ ಎನ್ನುತ್ತಾರೆ ಗ್ರಾಮದ ಮಲ್ಲಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.