ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಉಳಿವಿಗೆ ಪಣ ತೊಡಿ: ಕೆರೆಹಳ್ಳಿ ದೊರೆಸ್ವಾಮಿ

Published 28 ಏಪ್ರಿಲ್ 2024, 5:11 IST
Last Updated 28 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ಮೈಸೂರು: ‘ರಂಗಭೂಮಿ ಕಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ರಂಗ ನಿರ್ದೇಶಕ ಕೆರೆಹಳ್ಳಿ ಬಿ.ದೊರೆಸ್ವಾಮಿ ಹೇಳಿದರು.

ಇಲ್ಲಿನ ಆಲನಹಳ್ಳಿ ಬಡಾವಣೆಯ ವಿನಾಯಕನ ದೇವಸ್ಥಾನದಲ್ಲಿ ಎನ್.ಆರ್.ವಲಯದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ವೀರಶೈವ ಸಮಾನ ಮನಸ್ಕರ ಸ್ನೇಹ ಬಳಗದಿಂದ ಆಯೋಜಿಸಿದ್ದ ‘ರಂಗಭೂಮಿ ಮಹತ್ವ, ಹಾಡುಗಾರಿಕೆ, ಅಭಿನಯ’ ವಿಷಯ ಕುರಿತು ಮಾತನಾಡಿದರು.

‘ಕಲೆ ಎಲ್ಲರನ್ನೂ ಕೈ ಬಿಸಿ ಕರೆಯುತ್ತದೆ. ಆದರೆ, ಕೆಲವರನ್ನ ಮಾತ್ರ ಆಯ್ಕೆ ಮಾಡುತ್ತದೆ. ಬದುಕಲ್ಲಿ ಕಲೆ ಅಳವಡಿಸಿಕೊಂಡರೆ ದುಶ್ಚಟಕ್ಕೆ ಬಲಿಯಾಗದೆ ನಡೆಯಬಹುದು. ಮಕ್ಕಳಲ್ಲಿ ರಂಗಭೂಮಿ ಕಲೆ, ಹಾಡುಗಾರಿಕೆ, ಅಭಿನಯ, ವಾಕ್ ಚಾತುರ್ಯ ಹಾಗೂ ಶ್ರದ್ಧೆ ಆಸಕ್ತಿ ಹೇಗಿರಬೇಕು ಎಂಬುದರ ಅರಿವು ಮೂಡಿಸಲು ಶಿಬಿರ ಪ್ರಯತ್ನಿಸುತ್ತಿದೆ. ಈ ಕ್ಷೇತ್ರದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ’ ಎಂದರು.

ರಂಗಭೂಮಿ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು, ರಂಗಕ್ಷೇತ್ರದ ಚಿಕ್ಕಹಳ್ಳಿ ಪುಟ್ಟಣ್ಣ, ಶಿವಬಸಪ್ಪ, ಸಕಹಳ್ಳಿ ಮಹದೇವಸ್ವಾಮಿ, ಹೊಸಕೋಟೆ ನಂದೀಶ್, ಕೆರೆಹಳ್ಳಿ ಲೋಹಿತ್, ಬಾಗಳಿ ಮಹೇಶ್, ಹೊಸಕೋಟೆ ಪ್ರಭುಸ್ವಾಮಿ, ಹೊಸಕೋಟೆ ಸುಂದ್ರಪ್ಪ, ಯೋಗ ಕ್ಷೇತ್ರದ ವಿಠಲ್ ರಾಜಣ್ಣ, ಸಂತೋಷ್, ಹನುಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT