ನಂಜನಗೂಡು: ‘ಭಗವದ್ಗೀತೆ ಮಾನವನ ಬದುಕಿನ ಗೊಂದಲಗಳನ್ನು ದೂರ ಮಾಡುವ ಶಕ್ತಿ ಇರುವ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಗ್ರಂಥ’ ಎಂದು ಬೆಂಗಳೂರಿನ ಶ್ರೀ ಸುವಿಚಾರ ಗುರುಗಳು ಹೇಳಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿ ಮಂಗಳವಾರ 'ಗೀತೋಪದೇಶಿ ಗೃಹ ಬಳಗ" ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸನಾತನ ಧರ್ಮ ಎಲ್ಲ ಕಾಲಕ್ಕೂ ಪ್ರಸ್ತುತ, ವೇದವ್ಯಾಸರಿಂದ ರಚಿತವಾದ ಮಹಾಭಾರತದ ಭಾಗವಾಗಿರುವ ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ತತ್ವಗಳು ಮತ್ತು ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಕೆಲಸಗಳಲ್ಲೂ ಯಶಸ್ಸು ಸಾಧಿಸಬಹುದು. ಭಗವದ್ಗೀತೆಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇದೆ, ಭಗವದ್ಗೀತೆಯ ಪಠಣದಿಂದ ಬದುಕಿನಲ್ಲಿ ಸಾರ್ಥಕತೆ ಮೂಡುತ್ತದೆ‘ ಎಂದರು.

ಕಾರ್ಯಕ್ರಮದಲ್ಲಿ ಭಕ್ತವತ್ಸಲ ಶ್ರೀ ಕೃಷ್ಣನ ಸ್ತುತಿಯನ್ನು ಹಾಡಿದರು, ಶ್ರೀವಾರಿ ಭಜನಾ ಮಂಡಳಿ ಮುಖ್ಯಸ್ಥ ಸರಸ್ವತಿ ಶ್ರೀನಿವಾಸ್ ಅವರು ಭಜರಂಗಿಯನ್ನು ಸ್ತುತಿಸಿದರು.

ನಾಗಶರ್ಮ, ಅನ್ನಪೂರ್ಣ ಮಂಜುನಾಥ್ ಅರಸ್, ಇಂದಿರೇಶ್ , ಸುಮಾ, ಅಶ್ವತ್ಥನಾರಾಯಣ, ಶೋಭನಾಗಶಯನ ಉಪಸ್ಥಿತರಿದ್ದರು.

‘ಪರಂಪರೆಯ ಪರಿಚಯ’:

ಗೀತೋಪದೇಶಿ ಗೃಹ ಬಳಗದ ಸಂಸ್ಥಾಪಕ ತಗಡೂರು ಗೋಪಿನಾಥ್ ಮಾತನಾಡಿ ಬಳಗವು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸುತ್ತಿದೆ. ಗೀತೋಪದೇಶಿ ಸೇವಾ ಕಾರ್ಯಗಳನ್ನು ಗಮನಿಸಿ ಸಂಸ್ಥೆಗೆ ದೇಶ ವಿದೇಶಗಳಿಂದಲೂ ಸದಸ್ಯರು ಸೇರುತ್ತಿರುವುದು ಶ್ಲಾಘನೀಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.