ಬೆಟ್ಟದಪುರ: ‘ತಾಲ್ಲೂಕಿನಲ್ಲಿ ಸಿಗುವ ಎಲ್ಲಾ ಸರ್ಕಾರಿ ಸೇವೆಗಳು ಪ್ರಮುಖ ಹೋಬಳಿಯಾದ ಬೆಟ್ಟದಪುರದಲ್ಲಿ ಸಿಗಬೇಕು. ವಾಣಿಜ್ಯ ಕೇಂದ್ರ, ಐತಿಹಾಸಿಕ ಮಹತ್ವವಿರುವ ಸ್ಥಳವಾಗಿರುವುದರಿಂದ ಸಾಕಷ್ಟು ಅನುದಾನವನ್ನು ಈ ಹೋಬಳಿಗೆ ನೀಡಲಾಗಿದೆ’ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಗ್ರಾಮದಲ್ಲಿ ಶನಿವಾರ ಪ್ರಮುಖ ವೃತ್ತದ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ವೃತ್ತ ನಿರ್ಮಾಣಕ್ಕೆ ₹1.25 ಕೋಟಿ ನೀಡಲಾಗಿದೆ. ವೃತ್ತ ನಿರ್ಮಾಣವನ್ನು ವಿಶಾಲವಾಗಿ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವೃತ್ತ ಅಭಿವೃದ್ಧಿಯಲ್ಲಿ ಸ್ಥಳೀಯರು ಯಾರು ಆಕ್ಷೇಪ ವ್ಯಕ್ತಪಡಿಸಬಾರದು. ಕೊಡಗು, ಹಾಸನ, ಕೆ.ಆರ್ ನಗರ, ಪಿರಿಯಾಪಟ್ಟಣ ಇಷ್ಟು ನಗರಗಳ ಸಂಪರ್ಕ ಕಲ್ಪಿಸುವ ವೃತ್ತ ಇದಾಗಿದೆ. ಸ್ಥಳೀಯರು ಸಹಕಾರ ನೀಡಿದರೆ ಪಾದಚಾರಿ ಮಾರ್ಗವನ್ನು ವಿಸ್ತರಣೆ ಮಾಡಿ ನಗರದ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ’ ಎಂದರು.

ಇದೆ ವೇಳೆ ಭುವನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮತ್ತು ದೇವಾಂಗ ಶೆಟ್ಟಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ, ಕೊಣಸೂರು ಗ್ರಾಮದ ಪರಿಮಿತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕು ಆಶ್ರಯ ಸಮಿತಿ ಮತ್ತು ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಮುಖಂಡರಾದ ಪ್ರಕಾಶ್, ಲೋಕೇಶ್, ಕುಂಜಪ್ಪ ಕಾರ್ನಾಡ್, ಸರಸ್ವತಿ, ಅನಿತಾ ತೋಟಪ್ಪಶೆಟ್ಟಿ, ಜಗದೀಶ್, ನಾಗರಾಜು, ಭೀಮಣ್ಣ, ಪುಟ್ಟರಾಜು, ಮಂಜುನಾಥ್, ತಹಶೀಲ್ದಾರ್ ನಿಸರ್ಗ ಪ್ರಿಯಾ ಜೆ, ಲೋಕೋಪಯೋಗಿ ಎಂಜಿನಿಯರ್ ಕುಮಾರ್, ದಿನೇಶ್, ಕೆ.ಆರ್.ಐ.ಡಿ.ಎಲ್ ಸುಂದರ್ ರಾಜ್, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಪಿಎಸ್ಐ ಅಜಯ್ ಕುಮಾರ್, ಪಿಡಿಒ ಮಂಜುನಾಥ್ ಇದ್ದರು.

₹ 2 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣ

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ ‘ಗ್ರಾಮದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ದೇವಾಲಯ ಶಿಥಿಲಗೊಂಡಿದ್ದು ಪೂಜೆಗೆ ಭಕ್ತರಿಗೆ ಸಮಸ್ಯೆ ಉಂಟಾಗಿದೆ. ಬೆಟ್ಟ ಹತ್ತಲು ರಸ್ತೆ ಅಥವಾ ರೋಪ್ ವೇ ವ್ಯವಸ್ಥೆಯಾಗಬೇಕಿದೆ. ಬೆಟ್ಟದಲ್ಲಿ ಕುಡಿಯುವ ನೀರು ಸರಬರಾಜು ಅರ್ಧಕ್ಕೆ ನಿಂತಿದೆ. ಅದನ್ನು ಸಂಪೂರ್ಣ ತುದಿಯವರೆಗೂ ಸಿಗುವಂತಹ ಕೆಲಸ ಮಾಡಿಸಬೇಕು. ಬೆಟ್ಟ ಹತ್ತುವ ಭಕ್ತರಿಗೆ ಶೌಚಾಲಯ ಮತ್ತು ಸ್ನಾನದ ಮನೆ ಕಟ್ಟಿಸಿಕೊಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ‘ಸ್ನಾನದ ಮನೆ ಹಾಗೂ ಶೌಚಾಲಯ ಕಟ್ಟಿಸಿ ಕೊಡುವ ವ್ಯವಸ್ಥೆಯನ್ನು ಮಾಡಿಸುತ್ತೇವೆ. ಅದರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ನೋಡಿಕೊಳ್ಳಬೇಕು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲೆಂದು ₹ 2 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.