ಮೈಸೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮದಂತಿರುವ ಚುನಾವಣಾ ಪ್ರಕ್ರಿಯೆ ಅಣಕಿಸುವಂತಹ ಕಾಂಗ್ರೆಸ್ನ ಹಲವು ನಿರಾಧಾರ ಆರೋಪಗಳಿಗೆ ಬಿಹಾರದ ಪ್ರಜ್ಞಾವಂತ ಮತದಾರರು ಉತ್ತರ ನೀಡಿದ್ದಾರೆ’ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ ಅದರ ನಾಯಕರು ಚಕಾರವೆತ್ತುವುದಿಲ್ಲ. ಆದರೆ ಸೋತಾಗ ಇವಿಎಂ ಯಂತ್ರ, ಮತಗಳ್ಳತನ, ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಾರೆ. ಅನೈತಿಕ ಮಾರ್ಗದಲ್ಲಿ ರಾಜಕೀಯ ನಡೆಸುವ ಹೀನ ಸ್ಥಿತಿ ಬಿಜೆಪಿಗಿಲ್ಲ. ಸುಳ್ಳು ಆರೋಪಗಳಿಗೆ ಮತದಾರ ಉತ್ತರಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಿಹಾರ ಫಲಿತಾಂಶವು ದೇಶದ ರಾಜಕಾರಣಕ್ಕೆ ಮಹತ್ವದ ಸಂದೇಶ ರವಾನಿಸಿದೆ. ಜನರಿಗೆ ಉಚಿತ ಗ್ಯಾರಂಟಿಗಳ ಮೂಲಕ ಆಮಿಷವೊಡ್ಡಿದರೂ ಅಂತಿಮವಾಗಿ ಉತ್ತಮ ಆಡಳಿತ ನೀಡುವರನ್ನು ಜನ ಆಶೀರ್ವದಿಸುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಗ್ಯಾರಂಟಿಗಳ ಗಲಾಟೆ ನಡುವೆ ಅಂತಿಮವಾಗಿ ಗೆಲ್ಲುವುದು ಜನಾಭಿಪ್ರಾಯವೇ ಎನ್ನುವುದು ಗ್ಯಾರಂಟಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.