ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮದ ನಿರ್ಮೂಲನೆ ಹೇಳಿಕೆ‌ ಕೊಡುವವರು ಅಯೋಗ್ಯರು, ರಾಕ್ಷಸರು: ಈಶ್ವರಪ್ಪ

Published 4 ಸೆಪ್ಟೆಂಬರ್ 2023, 9:38 IST
Last Updated 4 ಸೆಪ್ಟೆಂಬರ್ 2023, 9:38 IST
ಅಕ್ಷರ ಗಾತ್ರ

ಮೈಸೂರು: ಸನಾತನ ಧರ್ಮವನ್ನು ಬೇರು ಸಹಿತ ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ, ಅಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ಮುಖಂಡ ಕೆ.ಎಸ್.‌ ಈಶ್ವರಪ್ಪ ಕಿಡಿಕಾರಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ‌ಅವರು, ಅವರ ಅಪ್ಪ ಬಂದರೂ ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಅಯೋಗ್ಯರು, ರಾಕ್ಷಸರು ಈ ರೀತಿ ಮಾತನಾಡುತ್ತಾರೆ. ಹಿಂದೆಯೂ ಸಾಕಷ್ಟು ಜನ ಈ ರೀತಿ ಮಾತನಾಡಿದ್ದಾರೆ.

ಅವರೆಲ್ಲಾ ನಾಶವಾಗಿದ್ದಾರೆ. ಇವರೂ ನಾಶವಾಗುತ್ತಾರೆ. ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ' ಎಂದರು.

ರಾಜ್ಯ ಸರ್ಕಾರವು ಅಭಿವೃದ್ಧಿಗಾಗಿ ಒಂದಿಡೀ ಮಣ್ಣನ್ನೂ ನೀಡಿಲ್ಲ. ನಮ್ಮ ಕಾಲದ ಕಾಮಗಾರಿಗೂ ಅನುದಾನ ನೀಡಿಲ್ಲ.‌ ರಾಜ್ಯದಲ್ಲಿ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಏನನ್ನೂ ಹೇಳುವುದಿಲ್ಲ. ಅವರಿಗೆ ಒಳ್ಳೆಯ ಬುದ್ದಿ ಕೊಡುವಂತೆ ದೇವರಲ್ಲಿ ಅಂತಾ ಪ್ರಾರ್ಥಿಸುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸೇಫ್ ಇಲ್ಲ. ಲೋಕಸಭೆ ಚುನಾವಣೆಗೂ ಮುಂಚೆ ಅಥವಾ ಆದ ಮೇಲೆ ಈ ಸರ್ಕಾರ ಬೀಳುತ್ತದೆ. ಸರ್ಕಾರ ಹೇಗಿದೆ ಎನ್ನುವುದನ್ನು‌ ಅವರ ಶಾಸಕ ಬಸವರಾಜ ರಾಯರೆಡ್ಡಿ ಅಥವಾ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಕೇಳಿ. ಇದು ಲಾಟರಿಯಿಂದ ಬಂದ ಸರ್ಕಾರ‌. ಒಂದು ಸಲ ಬಿಜೆಪಿ- ಕೆಜೆಪಿಯಿಂದ, ಈಗ ಗ್ಯಾರಂಟಿಗಳಿಂದ ಬಂದಿದೆ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ' ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ. ಹೀಗಾಗಿಯೇ ಆ ಸಮಾಜದವರ ಎದುರು ಪ್ರತಾಪ ಸಿಂಹ ಅವರನ್ನು ಸೋಲಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ. ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು.‌ ಅವರು ಹೇಳಿದ್ದೆಲ್ಲವೂ ಸುಳ್ಳಾಗಲಿದೆ. ಪ್ರತಾಪ ಮತ್ತೆ ಗೆಲ್ಲುತ್ತಾರೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.

ಓದಿ... ಸನಾತನ ಧರ್ಮ ಕೊರೊನಾ, ಡೆಂಗಿಗೆ ಸಮ ಎಂದ ಉದಯ ನಿಧಿ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT