ಮೈಸೂರು: ‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ಶೂ ಎಸೆತ ಆಕಸ್ಮಿಕವಲ್ಲ. ಈ ಕೃತ್ಯದ ಹಿಂದೆ ಮಹಾತ್ಮ ಗಾಂಧೀಜಿಯನ್ನು ಕೊಂದವರ ವಿಚಾರಧಾರೆ ಕೆಲಸ ಮಾಡಿದೆ’ ಎಂದು ಸಾಹಿತಿ ಡಾ.ಎಚ್.ಎಸ್. ಅನುಪಮಾ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಇಲ್ಲಿನ ಮಾನಸ ಗಂಗೋತ್ರಿಯ ಕಾನೂನು ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಿಜೆಐ ಮೇಲಿನ ದಾಳಿ’ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.

‘ಶೂ ಎಸೆತವನ್ನು ಖಂಡಿಸಬೇಕು, ದಲಿತ ನ್ಯಾಯಮೂರ್ತಿ ಮೇಲಿನ, ನ್ಯಾಯವ್ಯವಸ್ಥೆ ಮೇಲಿನ ದಾಳಿಯಾಗಿಯೂ ಇದನ್ನು ಖಂಡಿಸಬೇಕು. ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಪ್ರತಿಕ್ರಿಯೆಯು ಆತನ ಕ್ರಿಯೆಯಲ್ಲಿನ ಪೂರ್ವಯೋಜನೆ, ಮನಸ್ಸಿನಲ್ಲಿರುವ ಜಾತಿಯತೆ ವಿಷವನ್ನು ತೋರುತ್ತದೆ. ಧಾರ್ಮಿಕ ಭಾವನೆಗೆ ಧಕ್ಕೆ ಎನ್ನುವವರಿಗೆ ನ್ಯಾಯದ ಭಾವನೆಗೆ ಧಕ್ಕೆಯಾಗುವುದು ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ರಾಮ ಜನ್ಮಭೂಮಿ, ಶಬರಿಮಲೆ ಪ್ರಕರಣಗಳಲ್ಲಿಯೂ ಧಾರ್ಮಿಕ ಭಾವನೆಗೆ ಘಾಸಿ ಎಂಬ ಮಾತು ಕೇಳಿಬಂದಿತ್ತು. ಆದರೆ ಅಲ್ಲಿ ಶೂ ಎಸೆತವಾಗಿರಲಿಲ್ಲ. ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ತಾರತಮ್ಯವೇ ಇದಕ್ಕೆ ಕಾರಣ. ಆ ವಕೀಲನ ಎದೆಯೊಳಗೆ ಗಾಂಧೀಜಿ ಇದ್ದಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ’ ಎಂದರು.

‘ಅನ್ಯಾಯ, ಅಕ್ರಮಗಳನ್ನು ತಡೆಯುವಲ್ಲಿ ಕಾನೂನು ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿ ಸಾಮಾಜಿಕ ಚಳವಳಿಗಳೂ ಅಗತ್ಯ. ಕಾನೂನಿನಿಂದಲೇ ಎಲ್ಲವೂ ಆಗುವುದಿಲ್ಲ. ಇಂದಿನ ಯುವಜನರಿಗೆ ಗಾಂಧಿ, ಅಂಬೇಡ್ಕರ್ರಂತಹ ಉದಾತ್ತ ಮಾದರಿಗಳನ್ನು ನೀಡುವಲ್ಲಿ ನಾವು ಎಡವಿದ್ದೇವೆ. ಹಾಗಾಗಿಯೇ ಸಂವಿಧಾನದ ಮೇಲಿನ ಈ ದಾಳಿ ಅವರಲ್ಲಿ ಯಾವುದೇ ಆತಂಕ ಮೂಡಿಸುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ‘ವಿಷ್ಣು ಮೂರ್ತಿಯ ತಲೆ ಪ್ರತಿಷ್ಠಾಪನೆಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತದೆ. ಬಡವರು, ಶೋಷಿತರ ಪರವಾಗಿ ಯಾರಾದರೂ ಅರ್ಜಿ ಸಲ್ಲಿಸಿದ್ದಾರೆಯೇ? ಮೈಸೂರಿನಲ್ಲಿ 10 ವರ್ಷದ ಬಾಲಕಿ ಕೊಲೆಯಾಯಿತು? ಯಾಕೇ ಯಾರೊಬ್ಬರೂ ಪಿಐಎಲ್ ಸಲ್ಲಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳದಿದ್ದರೆ ಸಂವಿಧಾನ ರಕ್ಷಣೆ ಸಾಧ್ಯವಿಲ್ಲ. ಪ್ರಶ್ನಿಸಬೇಕು, ವಿವೇಚನೆಯಿಂದ ಪ್ರತಿಕ್ರಿಯಿಸಬೇಕು. ಜಾತಿ, ಧರ್ಮವನ್ನು ಮನೆಯಲ್ಲಿಟ್ಟು ದೇಶವನ್ನು ಕಟ್ಟಬೇಕು. ಈ ಜಾಣ್ಮೆ, ಪ್ರಬುದ್ಧತೆಯನ್ನು ಹೊಂದಬೇಕು’ ಎಂದು ಕಿವಿಮಾತು ಹೇಳಿದರು.

ಸಹಾಯಕ ಪ್ರಾಧ್ಯಾಪಕಿ ಜೆ.ಕೆ. ಸುಜಾತಾ, ಪ್ರೊ. ಟಿ.ಆರ್.ಮಾರುತಿ, ಸಂಘದ ಗೌರವಾಧ್ಯಕ್ಷ ಕೊ.ಲಿಂಗರಾಜು, ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ಮಾತನಾಡಿದರು. ವಿದ್ಯಾರ್ಥಿನಿ ಎ.ಚಂದನಾ ನಿರ್ವಹಿಸಿದರು.

ಸಿಜೆಐ ಅಥವಾ ಕಸ ಹೊಡೆಯುವ ನೌಕರ ಇರಲಿ ಎಲ್ಲರಿಗೂ ವ್ಯಕ್ತಿಗತ ಗೌರವವಿದೆ. ಕಾನೂನಿನಲ್ಲಿ ವಾದಕ್ಕೆ ಅವಕಾಶ ಇದೆ. ಚಪ್ಪಲಿ ಎಸೆಯುವುದಕ್ಕೆ ಇಲ್ಲ
ಪ್ರೊ.ಟಿ.ಆರ್.ಮಾರುತಿ ಅಧ್ಯಕ್ಷ ಮೈಸೂರು ವಿವಿ ಕಾನೂನು ಅಧ್ಯಯನ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.