ಮೈಸೂರಿನ ಶಿವರಾಂಪೇಟೆಯಲ್ಲಿ ಕ್ರಿಸ್‌ಮಸ್ ಹಬ್ಬದ ವ್ಯಾಪಾರದಲ್ಲಿ ನಿರತರಾಗಿರುವ ಗ್ರಾಹಕರು
ಚರ್ಚ್; ವಿಶೇಷ ಪ್ರಾರ್ಥನೆ, ಪೂಜೆಗೆ ಸಿದ್ಧ ಸಮುದಾಯದಲ್ಲಿ ಗರಿಗೆದರಿದ ಸಂಭ್ರಮ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
ಸ್ನೇಹಿತರಿಗೆ ಕ್ರಿಸ್‌ಮಸ್ ಉಡುಗೊರೆ ನೀಡಲು ಮಾರುಕಟ್ಟೆಗೆ ಬಂದಿದ್ದೆ. ಹಬ್ಬಕ್ಕೆಂದು ಬಂದಿರುವ ಆಲಂಕಾರಿಕ ವಸ್ತುಗಳನ್ನು ನೋಡುವುದೇ ಒಂದು ಸಂಭ್ರಮ
ಪ್ರಿಯಾ ಈಶ್ವರ್‌ನಗರ
ಇಂದು ರಾತ್ರಿಯಿಂದ ಪೂಜೆ ಆರಂಭ
ಕ್ಯಾಥೋಲಿಕ್ ಪ್ರಧಾನ ಚರ್ಚ್ ಸೇಂಟ್ ಫಿಲೋಮಿನಾದಲ್ಲಿ ಡಿ.24ರಂದು ರಾತ್ರಿ 11.30ಕ್ಕೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಜಾಗರಣೆ ಕ್ರಿಸ್‌ಮಸ್ ಬಲಿಪೂಜೆ ನೆರವೇರಲಿದೆ. ಸರಿಯಾಗಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ‘ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಡಿ.25ರಂದು ಬೆಳಿಗ್ಗೆ 5ರಿಂದ 9ರವರೆಗೆ ಪ್ರಮುಖ ಪ್ರಾರ್ಥನೆಯು ತಮಿಳು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಡೆಯಲಿದೆ. 4 ದಿವ್ಯ ಬಲಿಪೂಜೆಗಳು ನೆರವೇರಲಿದ್ದು ಸಂಜೆ 6ಕ್ಕೂ ಪೂಜೆ ನಡೆಯಲಿದೆ. ಬಳಿಕ ಸಾರ್ವಜನಿಕರಿಗೆ ಚರ್ಚ್ ಪ್ರವೇಶ ನೀಡಲಾಗುತ್ತದೆ’ ಎಂದು ಚರ್ಚ್‌ನ ಫಾದರ್ ಪೀಟರ್ ತಿಳಿಸಿದರು. ‘ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಇಂದು 6ರಿಂದ 8 ದೀಪಾರಾಧನೆ ಡಿ.25ರಂದು ಬೆಳಿಗ್ಗೆ 8.30 10.30ರವರೆಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿದೆ’ ಎಂದು ರಾಮಕೃಷ್ಣನಗರದ ಯೇಸು ಕೃಪಾಲಯದ ಫಾದರ್ ಜಾನ್ಸನ್ ಪೌಲ್ ತಿಳಿಸಿದರು.