ಬೆಟ್ಟದಪುರ : ‘ಸಂಸ್ಥೆ ಮತ್ತು ಅದರ ಸದಸ್ಯರ ನಡುವೆ ಉತ್ತಮ ಹೊಂದಾಣಿಕೆ ಇದ್ದಾಗ ಮಾತ್ರ ಒಂದು ಸಂಸ್ಥೆ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಈ.ಪಿ ಲೋಕೇಶ್ ತಿಳಿಸಿದರು.

ಬಾರಸೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಸಂಘದ ಅಧ್ಯಕ್ಷರಾದ ಅವರು ಮಾತನಾಡಿದರು.

‘1966ರಲ್ಲಿ ಪ್ರಾರಂಭವಾದ ಈ ಸಂಸ್ಥೆ ₹100 ರಿಂದ ಆರಂಭಿಸಿದ್ದು, ಈಗ ₹ 6.5 ಕೋಟಿ ವಹಿವಾಟು ನಡೆಸುತ್ತಿದೆ. ತಾಲ್ಲೂಕಿನಲ್ಲಿ ಮಾದರಿ ಸಂಘ ಎಂಬ ಹೆಗ್ಗಳಿಕೆಗೆ ಸಹ ಪಾತ್ರವಾಗಿದೆ, ಪ್ರತಿ ಸದಸ್ಯ ಸಂಸ್ಥೆಯ ಬೆಳವಣಿಗೆ ಪಕ್ಷಾತೀತ ಸಹಕಾರ ನೀಡುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದೆ ’ಎಂದರು.

‘ ಸಾಲ ಪಡೆದವರು ನಿಗದಿತ ಸಮಯಕ್ಕೆ ಮರುಪಾವತಿಸಿದರೆ, ಸಂಘವು ಆರ್ಥಿಕವಾಗಿ ಮತ್ತಷ್ಟು ಪ್ರಬಲಗೊಳ್ಳುತ್ತದೆ,. ₹5 ಲಕ್ಷದವರೆಗೆ ಶೂನ್ಯಬಡ್ಡಿ ದರದಲ್ಲಿ ಸಾಲ ಪಡೆಯಲು ರೈತರಿಗೆ ಅವಕಾಶವಿದೆ. ಫಲಾನುಭವಿಗಳ ಗ್ಯಾರಂಟಿ ಯೋಜನೆ ಖಾತೆ ನಿರ್ವಹಿಸುತ್ತಿರುವುರಿಂದ ₹ 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ತೆಗೆದುಕೊಳ್ಳಲು ಅವಕಾಶ ನೀಡಿದ್ದೇವೆ ಎಂದು ಹೇಳಿದರು.

ಉಪಾಧ್ಯಕ್ಷ ಮಹೇಂದ್ರ, ನಿರ್ದೇಶಕ ಬಾವಜಾನ್, ಬಸವರಾಜು, ಸಿದ್ದರಾಜೇಅರಸ್, ಮಹಾದೇವ, ನಾಗೇಗೌಡ, ಮಂಜುನಾಥ್, ಅಮೃತೇಶ್, ಶೋಭಾ, ಭಾಗ್ಯಮ್ಮ, ವೀರಭದ್ರ, ಜಿಲ್ಲಾ ಸಹಾಯಕ ಕೇಂದ್ರ ಬ್ಯಾಂಕ್ ಪ್ರತಿನಿಧಿ ಯತೀಶ್,ಸಂಘದ ಸಿಬ್ಬಂದಿ ಲೋಹಿತ್, ಮುಖಂಡರಾದ ಈರೇಗೌಡ, ಶಿವಕುಮಾರಸ್ವಾಮಿ, ರಾಮು ಭಾಗವಹಿಸಿದ್ದರು.

Highlights - ‘ಫಲಾನುಭವಿಗಳ ಗ್ಯಾರಂಟಿ ಯೋಜನೆ ಖಾತೆ ನಿರ್ವಹಣೆ’ ‘₹ 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲಕ್ಕೆ ಅವಕಾಶ’ ₹6.5 ಕೋಟಿ ವಹಿವಾಟು, ₹2.95 ಲಕ್ಷ ನಿವ್ವಳ ಲಾಭ

Cut-off box - 'ಗ್ರಾಮ ಒನ್' ಕೇಂದ್ರ ಶೀಘ್ರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ನಂದೀಶ್ ಮಾತನಾಡಿ ರೈತರ ಸಹಕಾರ ಮತ್ತು ಬೆಂಬಲದಿಂದ ಈ ಬಾರಿ ₹ 2.95 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯ ಅಧ್ಯಕ್ಷರ ಮುಂದಾಲೋಚನೆಯಂತೆ ಸಂಘದಲ್ಲಿ 'ಗ್ರಾಮ ಒನ್' ಕೇಂದ್ರ ತೆರೆಯಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.