ಮೈಸೂರು: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ‘ಪರ್ವ’ ನಾಟಕದ ಪ್ರದರ್ಶನವನ್ನು ಏ. 20ರವರೆಗೆ ರದ್ದು ಮಾಡಲು ಮೈಸೂರು ರಂಗಾಯಣ ನಿರ್ಧರಿಸಿದೆ.

‘ಸರ್ಕಾರದ ಮಾರ್ಗಸೂಚಿ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ. ಭೂಮಿಗೀತ ರಂಗಮಂದಿರದಲ್ಲಿ 200 ಆಸನಗಳ ವ್ಯವಸ್ಥೆಯಿದ್ದು, ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಪ್ರೇಕ್ಷಕರು ಹಾಗೂ ಕಲಾವಿದರ ಆರೋಗ್ಯ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ಏ.20ರ ಬಳಿಕ ಪ್ರದರ್ಶನದ ದಿನಾಂಕ ನಿಗದಿಪಡಿಸಲಾಗುವುದು. ‘ಪರ್ವ’ ನಾಟಕವನ್ನು ಮೇ ಅಂತ್ಯದವರೆಗೆ ಭೂಮಿಗೀತದ ರಂಗಮಂದಿರದಲ್ಲಿ ಪ್ರದರ್ಶಿಸುವುದಾಗಿ ಈ ಮೊದಲೇ ಹೇಳಿದ್ದೆವು. ಕೋವಿಡ್ ಕಾರಣ ಪ್ರದರ್ಶನ ಮುಂದೂಡಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.