ಮೈಸೂರು: ನಗರದಲ್ಲಿ ‘ಕೋವಿಡ್–19’ ಕಾಯಿಲೆಯಿಂದ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3ಕ್ಕೆ ಏರಿದೆ.

ಮಂಗಳವಾರ ಹೊಸದಾಗಿ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 5 ಮಂದಿ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. 89 ಮಂದಿ ಇನ್ನೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

‘ವಿಧಾನಸೌಧದಲ್ಲಿ ‘ಡಿ’ ದರ್ಜೆ ನೌಕರರಾಗಿದ್ದ ವ್ಯಕ್ತಿಯು (ರೋಗಿ 14638) ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕುಟುಂಬ ಸಮೇತರಾಗಿ ಜೂನ್ 27ರಂದು ತಮ್ಮ ಸ್ವಗ್ರಾಮವಾದ ಕೆ.ಆರ್.ನಗರ ತಾಲ್ಲೂಕಿನ ಕಂಚಿನಕೆರೆಗೆ ಬಂದಿದ್ದರು. 28ರಂದು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ಪಾಸಿಟಿವ್ ವರದಿ ಬರುವ ಮುನ್ನವೇ ಸೋಮವಾರ ರಾತ್ರಿ ಮೃತಪಟ್ಟರು’ ಎಂದು ಕೆ.ಆರ್.ನಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಂದ್ರಪ್ಪ ತಿಳಿಸಿದ್ದಾರೆ.

ಹೊಸದಾಗಿ ಪತ್ತೆಯಾದ ಕೋವಿಡ್ ರೋಗಿಗಳು 30, 48, 51, 18, 53, 25, 21, 50, 36ರ ವಯೋಮಾನದವರಾಗಿದ್ದಾರೆ. ಇವರಲ್ಲಿ ಒಬ್ಬರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಉಳಿದವರೆಲ್ಲರೂ ಪುರುಷರು.

ಹೊಸ ಸೋಂಕಿತರ ಪೈಕಿ ಒಬ್ಬರು ಬಿಹಾರದಿಂದ ಬಂದವರಾಗಿದ್ದರೆ, ಇಬ್ಬರಿಗೆ ಇತರೆ ಕೋವಿಡ್ ರೋಗಿಗಳ ಸಂಪರ್ಕ ಇರುವುದು ಖಚಿತಗೊಂಡಿದೆ. ಇನ್ನುಳಿದವರ ಸಂಪರ್ಕ ಪತ್ತೆಯಾಗಿಲ್ಲ. ಇವರಲ್ಲಿ ಮೂವರಿಗೆ ಶೀತಜ್ವರ ಮಾದರಿಯ ಅನಾರೋಗ್ಯದ ಸಮಸ್ಯೆಯ (ಐಎಲ್‌ಐ) ಲಕ್ಷಣಗಳು ಕಂಡು ಬಂದಿವೆ.

ಹೊಸ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇವರು ಎಲ್ಲೆಲ್ಲಿ ಭೇಟಿ ನೀಡಿದ್ದರು ಎಂಬ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.