ಎಚ್.ಡಿ.ಕೋಟೆ: ಜಾನುವಾರು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹುಣಸೂರು ಬಳಿ ವಶಕ್ಕೆ ಪಡೆದಿದ್ದು, ಪಟ್ಟಣದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
₹ 2 ಲಕ್ಷ ಮೌಲ್ಯದ ಸುಮಾರು ಐದು ಹಸುಗಳು ಹಾಗೂ ₹ 43 ಸಾವಿರ ನಗದು ಹಣ ವಶಕ್ಕೆ ಪಡೆದಿದ್ದಾರೆ.
‘ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಯನ್ನು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ವ್ಯಕ್ತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಶಡಿಸಿಕೊಳ್ಳಲಾಗಿದೆ’ ಎಂದು ವೃತ ನಿರೀಕ್ಷಕ ಶಬ್ಬೀರ್ ಹುಸೇನ್ ತಿಳಿಸಿದ್ದಾರೆ.
ತಾಲೂಕಿನ ಕೆ.ಯಡತೊರೆಯ ಕುಮಾರಿ ಎಂಬುವವರ ₹ 1 ಲಕ್ಷ ಮೌಲ್ಯದ 2 ಹಸು, 1 ಕರು, 2 ಟಗರುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಳ್ಳಲಾಗಿತ್ತು.
ಕಾರ್ಯಾಚರಣೆಯಲ್ಲಿ ಠಾಣಾ ಪಿಎಸ್‌ಐ ರಾಮು, ಸೈಯದ್ ಕಬೀರುದ್ದಿನ್, ಸುನೀಲ್, ಎಚ್.ಎಸ್.ಮೋಹನ್, ರಿತೀಶ್ ಕುಮಾರ್ ಇದ್ದರು.