ಮೈಸೂರು: ‘ಟಿಪ್ಪು ನಿಜ ಕನಸುಗಳು’ ನಾಟಕದ ಮೂಲಕ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಮಾಜದಲ್ಲಿ ಅಶಾಂತಿ ಹಾಗೂ ಗೊಂದಲ ಸೃಷ್ಟಿಸಿರುವುದಲ್ಲದೇ, ಗಾಂಧಿವಾದಿ ಪ.ಮಲ್ಲೇಶ್, ದೇವನೂರು ಮಹದೇವ, ಗಿರೀಶ್ ಕಾರ್ನಾಡ್ ಅವರನ್ನು ಅಸಭ್ಯವಾಗಿ ಟೀಕಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮವಹಿಸಬೇಕು’ ಎಂದು ಮೈಸೂರು ಪ್ರಜ್ಞಾವಂತ ನಾಗರಿಕ ಸಂಘಟನೆಗಳು ಆಗ್ರಹಿಸಿವೆ.

ಜಲದರ್ಶಿನಿಯಲ್ಲಿ ಮಂಗಳವಾರ ಸಭೆ ನಡೆಸಿದ ಹೋರಾಟಗಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ರಂಗಾಯಣ’ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಸರ್ಕಾರದ ನಿಯಮಾವಳಿಯಂತೆ ಸಂಸ್ಥೆ ಯನ್ನು ನೈತಿಕತೆ ಹಾಗೂ ಸಾಂಸ್ಕೃತಿಕ ಎಚ್ಚರದೊಂದಿಗೆ ನಡೆಸಬೇಕು. ಆದರೆ, ನಿರ್ದೇಶಕರು ವಿವಾದ ಸುಳಿಯಲ್ಲಿ ರಂಗಾಯಣವನ್ನು ಸಿಲುಕಿಸುತ್ತಿದ್ದಾರೆ. ‘ಟಿಪ್ಪು ನಿಜ ಕನಸುಗಳು’ ಎಂಬ ನಾಟಕದ ಮೂಲಕ ದ್ವೇಷ ಭಾವನೆ ಮೂಡಿಸುತ್ತಿದ್ದಾರೆ’ ಎಂದರು.

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ನಾಟಕವೊಂದರಲ್ಲಿ ಅಸಭ್ಯವಾಗಿ ಟೀಕಿಸಲಾಗಿತ್ತು’ ಎಂದರು.

ಲೇಖಕರಾದ ಎಸ್.ಜಿ.ಸಿದ್ದರಾಮಯ್ಯ, ನಾ.ದಿವಾಕರ, ರಂಗಕರ್ಮಿ ಎಚ್.ಜನಾರ್ಧನ, ಸ.ರ.ಸುದರ್ಶನ, ಕಾಳಚನ್ನೇಗೌಡ, ಮುಖಂಡರಾದ ಎಂ.ಲೋಕೇಶ್ ಕುಮಾರ್, ಸತ್ಯ, ಪುರುಷೋತ್ತಮ್, ಡಾ.ಹರೀಶ್‌ಕುಮಾರ್, ಎನ್.ಎಸ್.ಗೋಪಿನಾಥ್, ಕೆ.ಆರ್.ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.