ಮೈಸೂರು: ‘ಇಂದಿನ ರಾಜಕೀಯದಲ್ಲಿ ಶಕ್ತಿ ಇಲ್ಲದ ಮತದಾರರನ್ನು ಕಿತ್ತು ಬಿಸಾಕಿ, ನಕಲಿ ಮತದಾರರನ್ನು ಸೃಷ್ಟಿಸುವ ಸಿದ್ದಾಂತ ಜಾರಿಯಲ್ಲಿದೆ’ ಎಂದು ಪ್ರೊ.ಅರವಿಂದ ಮಾಲಗತ್ತಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 110ನೇ ಜಯಂತಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹಾಗೂ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಅವರಿಗೆ ಅರಸು ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ದೇಶದಲ್ಲಿ ಈವರೆಗೂ ಪ್ರಜೆಗಳನ್ನು ಬಳಸು ಮತ್ತು ಬಿಸಾಡು ಎಂಬ ಸಿದ್ದಾಂತ ಜಾರಿಯಲ್ಲಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಮತದಾರರನ್ನೇ ಬದಿಗೆ ಸರಿಸಲಾಗುತ್ತಿದೆ’ ಎಂದರು.

‘ಈ ಸಮಸ್ಯೆಗೆ ಉತ್ತರವನ್ನು ದೇವರಾಜ ಅರಸು ಆಡಳಿತದಲ್ಲಿ ಗಮನಿಸಬಹುದು. ಅವರದ್ದು ಪ್ರಜೆ ಮತ್ತು ಸೇವಾಕೇಂದ್ರಿತ ಸಿದ್ಧಾಂತವಾಗಿತ್ತು. ಅದರ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಪ್ರಜೆ ಮತ್ತು ಕರ್ತವ್ಯ ಕೇಂದ್ರಿತ ಸಿದ್ದಾಂತ. ಪ್ರಜೆಗಳ ಕಷ್ಟ ಸುಖವನ್ನು ಅರಿತು ನಿವಾರಿಸುವುದು ಕರ್ತವ್ಯವೆಂದು ಭಾವಿಸಿದ್ದಾರೆ’ ಎಂದರು.

‘ಅರಸು ಅವರೇ ನೇರವಾಗಿ ನನ್ನನ್ನು ಸರ್ಕಾರಿ ವೈದ್ಯ ನೌಕರಿಗೆ ಆಯ್ಕೆ ಮಾಡಿಕೊಂಡರು. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಡಾ.ಡಿ.ತಿಮ್ಮಯ್ಯ ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಮಡಿವಾಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿನಂದನ್, ಕುಂಬಾರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮುಖಂಡ ಲೋಕೇಶ್ ಮಾದಾಪುರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.