ಹುಣಸೂರು: ತಾಲ್ಲೂಕಿನ ಜೀವನದಿ ಲಕ್ಷ್ಮಣತೀರ್ಥ ಮುಂಗಾರು ಋತುವಿನ ಆರಂಭದಲ್ಲೇ ಮೈದುಂಬಿ ಹರಿಯುತ್ತಿದ್ದು, ಏತನೀರಾವರಿ ಯೋಜನೆಯಿಂದ ಕೆರೆ– ಕಟ್ಟೆಗಳಿಗೆ ನೀರು ಹರಿಸುವ ನಿರೀಕ್ಷೆಯಲ್ಲಿ ಅನ್ನದಾತರು ಇದ್ದಾರೆ.

ಲಕ್ಷ್ಮಣತೀರ್ಥ ಕೊಡಗು ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ ನಾಗರಹೊಳೆ ಮೂಲಕ ಹುಣಸೂರುವರೆಗೆ 148 ಕಿ.ಮೀ. ಹರಿದು ಕಾವೇರಿ ನದಿ ಸೇರುತ್ತದೆ. ಈ ನದಿ ಮುಂಗಾರಿನಲ್ಲಿ ಮೈದುಂಬಿ ಹರಿದು ಉಳಿದ ಋತುವಿನಲ್ಲಿ ಒಳಹರಿವಿಲ್ಲದೆ ಬತ್ತಿ ಹೋಗುತ್ತದೆ. ಲಕ್ಷ್ಮಣತೀರ್ಥ ನದಿಯನ್ನು ಅವಲಂಬಿಸಿ ತಾಲ್ಲೂಕಿನ 105 ಕೆರೆಗಳಿಗೆ ನೀರು ತುಂಬಿಸಲು 14 ಏತನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದು, ಈ ಘಟಕದಿಂದ ಕೆರೆಗಳಿಗೆ ನೀರು ಸೇರಿಸುವ ಚೈನ್ ಲಿಂಕ್ ಸಂಪರ್ಕ ಹೊಂದಿದೆ.

ಹನಗೋಡು ಅಣೆಕಟ್ಟೆಗೆ ಸೇರಿದ 125 ಕಿ.ಮೀ. ನಾಲಾ ಅಚ್ಚುಕಟ್ಟು ಹಾಗೂ ಹಾರಂಗಿ ವಿಭಾಗಕ್ಕೆ ಸೇರಿದ 125 ಕಿ.ಮೀ. ನಾಲೆಗಳ ಮೂಲಕ ಕೆರೆಗಳಿಗೆ ನೀರು ಹರಿಸುವುದರೊಂದಿಗೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಳಸುವ ವ್ಯವಸ್ಥೆ ಹೊಂದಿದೆ. ಲಕ್ಷ್ಮಣತೀರ್ಥ ನದಿ ನೀರು ಅವಲಂಬಿಸಿ ಕ್ಷೇತ್ರದ ವಿವಿಧ ಭಾಗದ ನದಿ ದಂಡೆಯಲ್ಲಿ 14 ಏತ ನೀರಾವರಿ ನಿರ್ಮಿಸಿರುವುದರಿಂದ ಹನಗೋಡು, ಬಿಳಿಕೆರೆ, ನಾಗರಹೊಳೆ ಅರಣ್ಯದಂಚಿನ ಭಾಗ ಸೇರಿದಂತೆ ಗಾವಡಗೆರೆ, ಚಿಲ್ಕುಂದ ಹೋಬಳಿ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ನಡೆದಿದೆ. 6 ತಿಂಗಳು ಜೀವ ತುಂಬಿ ಹರಿಯುವ ನದಿ ಕ್ಷೇತ್ರದ ಶೇ 90ರಷ್ಟು ಭಾಗದ ಜನ ಜಾನುವಾರುಗಳು ಸೇರಿದಂತೆ ಕೃಷಿಗೆ ನೀರುಣಿಸುತ್ತಿದೆ.

ನಾಲೆಗೆ ನೀರು: ‘ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆಯಿಂದ ಕಳೆದ ಮೂರು ದಿನದಿಂದ 3,500 ಕ್ಯೂಸೆಕ್ ನೀರು ಹರಿದು ಕಾವೇರಿ ನದಿ ಸೇರುತ್ತಿದೆ. ಕೆರೆ ಕಟ್ಟೆಗಳಿಗೆ ನೀರು ಹರಿಸಲು ಕನಿಷ್ಠ 3,750 ಕ್ಯೂಸೆಕ್ ನೀರು ಹರಿಯಬೇಕು. ಅಲ್ಲಿಯವರೆಗೆ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ’ ಎಂದು ಹಾರಂಗಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ಶಿರಿಯೂರು ನಾಲೆ: ‘ಲಕ್ಷ್ಮಣತೀರ್ಥ ನದಿಗೆ ಸೇರಿದ ಶಿರಿಯೂರು ನಾಲಾ ಅಚ್ಚುಕಟ್ಟು ಪ್ರದೇಶದ ನಾಲೆ ಸಂಪೂರ್ಣ ಹಾಳಾಗಿದ್ದು, ನಾಲೆಯಲ್ಲಿ ನೀರು ತುಂಬಿ ಹರಿದರೂ ನೀರು ಮುನ್ನುಗ್ಗದ ಪರಿಸ್ಥಿತಿ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ಹಲವು ಬಾರಿ ಹಾರಂಗಿ ನೀರಾವರಿ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರಗತಿಪರ ರೈತ ಅಗ್ರಹಾರ ರಾಮೇಗೌಡ ದೂರಿದರು.

‘ಏರಿ ದುರಸ್ತಿ ಮಾಡದ ಅಧಿಕಾರಿಗಳು’

‘ಹನಗೋಡು ಮತ್ತು ಹಾರಂಗಿ ನಾಲಾ ಸೀರಿಸ್ನಲ್ಲಿ ಬೆಳೆದಿರುವ ಜಂಗಲ್ ಮತ್ತು ಏರಿ ದುರಸ್ತಿ ಮಾಡುವಂತೆ ಹಾರಂಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ತಿಂಗಳು ಕಳೆದಿದ್ದರೂ ಕಾಮಗಾರಿ ಆರಂಭಿಸಿಲ್ಲ. ನದಿ ನೀರು ಪೋಲಾಗದಂತೆ ಕೆರೆ–ಕಟ್ಟೆಗಳಿಗೆ ತುಂಬಿಸಿ ನಂತರ ಕಾವೇರಿ ನದಿಗೆ ಹರಿಸುವಂತೆ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ದೂರಿದರು.

‘₹1.50 ಕೋಟಿ ಅನುದಾನ’

‘ಹನಗೋಡು ಮತ್ತು ಹಾರಂಗಿ ನಾಲಾ ಸೀರಿಸ್ನಲ್ಲಿ 250 ಕಿ.ಮೀ. ಜಂಗಲ್ ತೆರವಿಗೆ ₹1.50 ಕೋಟಿ ಅನುದಾನ ಮೀಸಲಿಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜೂನ್ 15ರ ನಂತರ ಕೆರೆ–ಕಟ್ಟೆಗಳಿಗೆ ಹನಗೋಡು ನಾಲೆಯಿಂದ ನೀರು ಹರಿಸಲಾಗುವುದು’ ಎಂದು ಹಾರಂಗಿ ನೀರಾವರಿ ಇಲಾಖೆ ಇಇ ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.