ಜಯಪುರ: ಜಯಪುರ ಹೋಬಳಿಯ ಸಿಂಧುವಳ್ಳಿ ಗ್ರಾಮದ ಗುರು ವಿದ್ಯಾ ವಿಕಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಪೋಷಕಾಂಶಗಳ ದಿನದ ಅಂಗವಾಗಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ವತಿಯಿಂದ ಬೆಂಕಿರಹಿತ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಬೆಂಕಿರಹಿತ ಅಡುಗೆ ಮಾಡಿದರು. ಎಸ್.ಜಿ.ವಿ.ಕೆ ಶಾಲಾ ಕಾರ್ಯದರ್ಶಿ ರಾಜು, ಮುಖ್ಯ ಶಿಕ್ಷಕ ಶಿವಕುಮಾರ್, ಚಂದ್ರಶೇಖರ್, ಶಾಲಾ ಶಿಕ್ಷಕರು, ಮಕ್ಕಳು ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಸಂಸ್ಥೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.