ಮೈಸೂರು: ನೆಲದ ಮಕ್ಕಳು ಗದ್ದೆಯಲ್ಲಿ, ಮನೆಯಲ್ಲಿ ದುಡಿಯುವಾಗ, ಒಕ್ಕಣೆ ಮಾಡುವಾಗ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ, ಹಾದಿಬೀದಿಗಳಲ್ಲಿ ಹಾಡುತ್ತಾ ಕಟ್ಟಿದ ಗೀತೆಗಳನ್ನು ಕಲಾವಿದರು ಇಲ್ಲಿ ಉಣಬಡಿಸಿದರು. ವಿವಿಧ ‘ಪದಗಳ’ ಮೆರವಣಿಗೆ ನಡೆಯಿತು. ಜಾನಪದ ಗೀತ–ಗಾಯನದ ರಸದೌತಣ ಸಭಿಕರಿಗೆ ದಕ್ಕಿತು.

ದಸರಾ ಅಂಗವಾಗಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರತಿಭಾ ಕವಿಗೋಷ್ಠಿ’ ತನ್ನ ವೈಶಿಷ್ಟ್ಯದಿಂದಾಗಿ ಗಮನಸೆಳೆಯಿತು.

ಸಾಂಪ್ರದಾಯಿಕ ಕವಿಗೋಷ್ಠಿಯ ಬದಲಿಗೆ ಪದಗಳನ್ನು ಪ್ರಸ್ತುತಪಡಿಸಿದ ಈ ‘ಗೋಷ್ಠಿ’ಯು ನಾಡಿನ ಜಾನಪದ ಕಥಾನಾಯಕರನ್ನು ಕಣ್ಮುಂದೆ ತಂದು ನಿಲ್ಲಿಸಿತು. ವಿವಿಧೆಡೆಯಿಂದ ಬಂದಿದ್ದ ಪರಿಣತ ಕಲಾವಿದರು ಜಾನಪದ ಕಲಾವೈಭವವನ್ನು ಕಂಚಿನ ಕಂಠಗಳಿಂದ ಪರಿಚಯಿಸಿದರು.

ಹದಪಾಕದ ರುಚಿ:

ಕವಿಗೋಷ್ಠಿಯಲ್ಲಿ ಹಲವು ಜಾನಪದ ಪ್ರಕಾರಗಳ ಹದಪಾಕ ಪ್ರೇಕ್ಷಕರಿಗೆ ರುಚಿಸಿತು. ಜನಪದ, ತತ್ವಪದ ಕಾವ್ಯ ವಾಚನ ಮತ್ತು ಗಾಯನ, ಕಂಸಾಳೆ, ತಂಬೂರಿ, ಬಸುರಿ ಬಯಕೆ ಪದ, ಜರಿವ ಪದ, ಸರಸ–ಸಲ್ಲಾಪ ಒಗಟು ಪದಗಳು, ಗಾದೆಗಳು, ಗೀಗಿ ಪದ, ಸೋಬಾನೆ ಪದ, ಅಣಕು ಪದ, ಪಾಡ್ದನ ಪ್ರಸ್ತುತಗೊಂಡವು. ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗ, ಬೆಳವಡಿ ಮಲ್ಲಮ್ಮ, ಬಸವಣ್ಣ ಅವರಿಗೆ ಜೈಕಾರಗಳು ಮೊಳಗಿದವು.

ಚಿನ್ಮಾದು ಅವರ ‘ತಾಯಿ ಹಾಡು’ ನಾಂದಿ ಹಾಡಿದ ಕಾರ್ಯಕ್ರಮದಲ್ಲಿ, ಕುಮಾರ ಅವರು ತತ್ವಪದ ಗಾಯನದಲ್ಲಿ ಆತ್ಮವಿಚಾರ ತತ್ವಗಳನ್ನು ಕಟ್ಟಿಕೊಟ್ಟರು. ಕೆಂಪಮ್ಮ ತಮ್ಮ ವಿದ್ಯಾರ್ಥಿಯೊಂದಿಗೆ ಹಾಡಿದ ಸರಸ ಸಲ್ಲಾಪ ಪದ, ಸೋಬಾನೆ ಪದ ರಂಜಿಸಿತು. ಮಂಡ್ಯದ ಕೆ.ಎಂ.ಕೃಷ್ಣೇಗೌಡ ಕೀಲಾರ ‘ಬಸುರಿ ಬಯಕೆ’ಯನ್ನು ಮಂಡಿಸಿದರು. ಅವರು ಕುಳಿತಲ್ಲಿಗೇ ಪೂರೈಸಿದ ಲಡ್ಡು, ಕೋಡುಬಳೆ, ಬಿಸಿ ಕಾಫ ಜಾನಪದ ರಸದೌತಣಕ್ಕೆ ಜೊತೆಯಾದವು!

ಗಾದೆ ಹಾಡಾಗಿಸಿದ ದೇವಾನಂದ:

ದಕ್ಷಿಣ ಕನ್ನಡದ ಜಯಂತಿ ಜಯಗುಜರನ್ ಅವರು ಪಾಡ್ದನದ ಮೂಲಕ ತುಳುನಾಡಿನ ದೈವಗಳ ಹುಟ್ಟಿನ ಸಂದರ್ಭವನ್ನು ಚಿತ್ರಿಸಿಕೊಟ್ಟರು. ಹಾಸನದ ದೇವಾನಂದ ವರಪ್ರಸಾದ್ ಜಾನಪದ ಗಾದೆಗಳನ್ನು ಪದ ಕಟ್ಟಿ ಹಾಡಿದರು. ‘ಕಾದೋನ್ ಕುರಿ ನೋಡು, ದುಡ್ದೋನ್ ಹೊಲ ನೋಡು, ಇದ್ದಾಗ ದಾನ ಕೊಡು, ಇಲ್ಲದಿದ್ದಾಗ ಬೇಡು ಮನ್ಸಂತೆ ಮಾದೇವ’ ಗಾದೆಗಳನ್ನು ಹಾಡಾಗಿ ಮಂಡಿಸಿದಾಗ ‘ಉಘೇ ಮಾದಪ್ಪ’ ಘೋಷಣೆ ಮೊಳಗಿತು.

ಚಾಮರಾಜನಗರದ ಕಲಾವಿದ ಕಂಚಿನ ಕಂಠದ ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಮಲೆಮಹದೇಶ್ವರ, ಬಿಳಿಗಿರಿ ರಂಗಯ್ಯನನ್ನು ವರ್ತಮಾನಕ್ಕೆ ತಂದರು. ಕೊಪ್ಪಳದ ಜೀವನಸಾಬ ವಾಲೀಕಾರ ಲಾವಣಿ ಪದ ಹಾಗೂ ಬಸವಣ್ಣನ ಕುರಿತು ತ್ರಿಪದಿ ಪ್ರಸ್ತುತಪಡಿಸಿದರು. ಸಿದ್ದರಾಜು ಕೋಣನಕೊಪ್ಪಲು, ಮರೀಗೌಡ ಪ್ರತಿಭೆ ಪ್ರದರ್ಶಿಸಿದರು.

ಕವಿಗೋಷ್ಠಿ ಉಪಸಮಿತಿಯಿಂದ ಆಯೋಜನೆ | ನಾಡಿದ ವಿವಿಧ ಭಾಗದ ಕಲಾವಿದರು ಭಾಗಿ | ಜಾನಪದ ಲೋಕಕ್ಕೆ ಕರೆದೊಯ್ದ ಕಾರ್ಯಕ್ರಮ

ಜಾನಪದ ಎಲ್ಲದರ ಮೂಲ: ನಂಜಯ್ಯ

ಕವಿಗೋಷ್ಠಿ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ‘ಜಾನಪದವು ಎಲ್ಲ ಜ್ಞಾನ ವಿಜ್ಞಾನ ತಂತ್ರಜ್ಞಾನದ ಮೂಲ. ಎಲ್ಲ ಜ್ಞಾನದ ಬೇರು ಹೌದು. ಹಾಡುಗಳ ಮೂಲಕ ಸಮಾಜ ತಿದ್ದುವ ಕೆಲಸವನ್ನು ಜನಪದರು ಮಾಡಿಕೊಂಡು ಬಂದಿದ್ದಾರೆ’ ಎಂದರು. ‘ಇತ್ತೀಚಿನ ವರ್ಷಗಳಲ್ಲಿ ಜಾನಪದ ಗಾಯಕರಿಗೆ ಹತ್ತಾರು ವೇದಿಕೆಗಳಲ್ಲಿ ವಿದೇಶಗಳಲ್ಲಿ ಅವಕಾಶಗಳು ಸಿಗುತ್ತಿವೆ. ನಮ್ಮ ನೆಲದ ಜಾನಪದ ಕಲೆಗಳನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯವಾಗಿದೆ’ ಎಂದರು. ಜಾನಪದ ತಜ್ಞರಾದ ಡಿ.ಕೆ. ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು ಹಾಗೂ ಶೈಲಜಾ ಹಿರೇಮಠ ಮುಖ್ಯ ಅತಿಥಿಯಾಗಿದ್ದರು. ಕವಿಗೋಷ್ಠಿ ಉಪ ಸಮಿತಿಯ ಅಧ್ಯಕ್ಷ ಸುರೇಶ್ ಉಪ ವಿಶೇಷಾಧಿಕಾರಿ ಜಿ.ಸೋಮಶೇಖರ್ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ. ಲೋಲಾಕ್ಷಿ ಉಪಾಧ್ಯಕ್ಷ ಮಹೇಶ್ ದಳಪತಿ ಭಾಗವಹಿಸಿದ್ದರು.

Graphic text / Statistics - ಈ ನೆಲಮೂಲದ ಜಾನಪದ ಕಲಾವಿದನಿಂದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ನಡೆಯುವ ದಿನ ಬರಲಿ ಪ್ರೊ.ನಂಜಯ್ಯ ಹೊಂಗನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.