ಮೈಸೂರು: ನಗರದ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ (ಪಾಠಶಾಲೆ) ಕಟ್ಟಡಗಳು ಶಿಥಿಲಗೊಂಡಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಪಾರಂಪರಿಕ ಕಟ್ಟಡ ಅಲ್ಲಲ್ಲಿ ಶಿಥಿಲಗೊಂಡಿದೆ. ಮುಂಗಾರು ಮಳೆಗಾಲ ಆರಂಭದ ಹೊಸ್ತಿಲಲ್ಲಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ. ಹೆಚ್ಚು ಮಳೆಯಾದರೆ ಅಪಾಯವನ್ನು ಆಹ್ವಾನಿಸುವ ಸ್ಥಿತಿ ಇದೆ.

ಈ ಪಾಠಶಾಲೆಯಲ್ಲಿ ಜೂನ್ 1ರಿಂದ ಪ್ರವೇಶಾತಿ ಹಾಗೂ ತರಗತಿಗಳು ಪ್ರಾರಂಭವಾಗಲಿದ್ದು ಸುರಕ್ಷತೆಯ ಬಗ್ಗೆ ಭೀತಿ ಎದುರಾಗಿದೆ. ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದರಿಂದಾಗಿ, ಮಳೆಗಾಲ ಬಂತೆಂದರೆ ಇಲ್ಲಿನ ಸಿಬ್ಬಂದಿಯ ಆತಂಕ ಹೆಚ್ಚಾಗುತ್ತದೆ.

ಮೈಸೂರು ಅರಸರು ಈ ಕಟ್ಟಡವನ್ನು ಸಂಸ್ಕೃತ ಪಾಠಶಾಲೆಗೆಂದು 1868ರಲ್ಲಿ ನೀಡಿದ್ದರು. ಸಂಸ್ಕೃತ, ವೇದ ಹಾಗೂ ಆಗಮವನ್ನು ಕಲಿಸಲು ದಾನವಾಗಿ ಕೊಟ್ಟಿದ್ದರು. ಇದನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರವು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಪಾಠಶಾಲೆಯ ‘ಸರಸ್ವತಿಪ್ರಾಸಾದ’ (ಗಣಪತಿತೊಟ್ಟಿ ಎಂದೂ ಕರೆಯಲಾಗುತ್ತದೆ) ಹೆಚ್ಚು ಶಿಥಿಲಾವಸ್ಥೆ ತಲುಪಿದೆ. ಆಗಮ ಹಾಗೂ ವೇದ ಕಲಿಕಾ ವಿಭಾಗದಲ್ಲಿ ಶಿಥಿಲವಾಗಿದ್ದು, ನೀರು ಸೋರುತ್ತದೆ. ಸಾಹಿತ್ಯ ವಿಭಾಗ (ಕಚೇರಿ ಕಟ್ಟಡ)ವೂ ಶಿಥಲಗೊಂಡಿವೆ. ಹಾಸ್ಟೆಲ್ ಹಿಂಭಾಗದ ಕಾಂಪೌಂಡ್ ಶಿಥಿಲಾವಸ್ಥೆಯಲ್ಲಿದೆ.

ದುರಸ್ತಿಗೆ ಮನವಿ:

ಒಂದೂವರೆ ಶತಮಾನ ಕಂಡಿರುವ, ಹಳೆಯದಾದ ಕಟ್ಟಡವಿದು. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡವನ್ನು ದುರಸ್ತಿ ಮಾಡಿಕೊಡಬೇಕು ಎಂದು ಅಲ್ಲಿನ ಪ್ರಾಂಶುಪಾಲರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

ಮಳೆಯಾದಾಗ ಅಲ್ಲಲ್ಲಿ ಸೋರುವುದು ಸಾಮಾನ್ಯವಾಗಿದೆ. ಹೀಗಾಗಿ, ಅದನ್ನು ತಪ್ಪಿಸಲು ಅಗತ್ಯ ದುರಸ್ತಿ ಮಾಡಬೇಕು. ಗೋಡೆಗಳಿಗೆ ಸುಣ್ಣದ ಗಾರೆಯ ಪ್ಲಾಸ್ಟರಿಂಗ್ ಆಗಬೇಕು. ಗೋಡೆಗಳಲ್ಲಿನ ಬಿರುಕು ಮುಚ್ಚಿ, ಪ್ಲಾಸ್ಟಿರಿಂಗ್ ಆಗಬೇಕು. ಚಾವಣಿಯಲ್ಲಿ ಈಗ ಇರುವ ಪದರವನ್ನು ತೆಗೆದು ಸುಣ್ಣಮಿಶ್ರಿತ ಜಲನಿರೋಧಕ ಅಳವಡಿಸಬೇಕು. ಹಾಳಾಗಿರುವ ಮರದ ಕಿಟಕಿ ಹಾಗೂ ಬಾಗಿಲುಗಳ ದುರಸ್ತಿ ಆಗಬೇಕು. ಮರದ ಕಂಬ, ಬಾಗಿಲು ಮತ್ತು ಕಿಟಕಿಗಳಿಗೆ ಪಾಲಿಶ್ ಆಗಬೇಕು ಹಾಗೂ ಕಟ್ಟಡದ ಹೊರಭಾಗಕ್ಕೆ ಬಣ್ಣ ಬಳಿಯಬೇಕು ಎಂಬ ಅಂದಾಜುಪಟ್ಟಿಯನ್ನು ಸಲ್ಲಿಸಲಾಗಿದೆ.

ಪತ್ರ ವ್ಯವಹಾರ ನಡೆಸಲಾಗಿದೆ:

‘ಕಟ್ಟಡಗಳ ದುರಸ್ತಿಯ ಅಗತ್ಯವಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಳೆ ಬಂದಾಗ ವಿವಿಧೆಡೆ ಸೋರುತ್ತದೆ. ಶಿಥಿಲಾವಸ್ಥೆಗೆ ತಲುಪಿರುವುದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿಸಲಾಗಿದೆ. ಪಾರಂಪರಿಕ ಕಟ್ಟಡವಾದ್ದರಿಂದ ಪುರಾತತ್ವ ಇಲಾಖೆಗೂ ಪತ್ರ ವ್ಯವಹಾರ ನಡೆಸಿದ್ದೇವೆ. ಈಚೆಗೆ ಲೋಕೋಪಯೋಗಿ ಇಲಾಖೆ ಮೂಲಕ ₹ 1 ಕೋಟಿ ಅಂದಾಜುಪಟ್ಟಿ ಸಲ್ಲಿಕೆಯಾಗಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದ್ದಾರೆ. ಕಟ್ಟಡಗಳು ದುರಸ್ತಿ ಆಗುವವರೆಗೂ ಆತಂಕ ಇದ್ದದ್ದೇ’ ಎಂದು ಪಾಠಶಾಲೆಯ ಪ್ರಾಂಶುಪಾಲ ಪಿ.ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಬಂದರೆ ಸೋರದೇ ಇರುವಂತೆ ಮಾಡಿಕೊಡಬೇಕು. ಸುಣ್ಣ–ಬಣ್ಣ ಬಳಿಸಿಕೊಡಬೇಕು ಎಂದು ಕೋರಿದ್ದೇವೆ. 10–15 ವರ್ಷಗಳಿಂದ ನಮ್ಮ ಕಟ್ಟಡ ಬಣ್ಣ ಕಂಡಿಲ್ಲ. ಹಿಂದೆಲ್ಲಾ ದಸರಾ ಸಮಯದಲ್ಲಿ ನಮ್ಮ ಪಾಠಶಾಲೆಗೂ ಬಣ್ಣ ಆಗುತ್ತಿತ್ತು. ಆದರೆ, ಅದು ನಿಂತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಆಗಮ’ಕ್ಕೆ ಹೆಚ್ಚು

ಈ ಪಾಠಶಾಲೆಯಲ್ಲಿ ಹೋದ ವರ್ಷ 70 ಮಕ್ಕಳು ಕಲಿತು ಹೋಗಿದ್ದಾರೆ. ಜೂನ್ 1ರಿಂದ ಪ್ರವೇಶಾತಿ ಆರಂಭಗೊಳ್ಳಲಿದೆ. 250ರಿಂದ 300 ಮಕ್ಕಳಿಗೆ ಆಗುವಂತಹ ಹಾಸ್ಟೆಲ್ ಇದೆ. ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಕಲಿಯುವುದಕ್ಕೆ ಬರುವ ಮಕ್ಕಳು ವಾಸ್ತವ್ಯಕ್ಕೆಂದು ಹಾಸ್ಟೆಲ್ ಕಟ್ಟಡ ಚೆನ್ನಾಗಿದೆ. ಆದರೆ ತರಗತಿಗಳು ನಡೆಯುವ ಕಟ್ಟಡಗಳು ಹಾಳಾಗಿವೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಅರ್ಚಕರಾಗಿ ನೇಮಕಾತಿ ಹೊಂದಬೇಕಾದರೆ ಧಾರ್ಮಿಕ ದತ್ತಿ ಇಲಾಖೆಯಿಂದ ನಡೆಸುವ ‘ಆಗಮ’ ಪರೀಕ್ಷೆ ಉತ್ತೀರ್ಣರಾಗಿರಬೇಕು. ಆದ್ದರಿಂದ ಇಲ್ಲಿಗೆ ‘ಆಗಮ’ ಕೋರ್ಸ್ ಓದಲೆಂದು ವಿವಿಧ ಜಿಲ್ಲೆಗಳ ಮಕ್ಕಳು ಬರುತ್ತಾರೆ. 6ನೇ ತರಗತಿಗೆ ಬಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇದರೊಂದಿಗೆ ಶಾಲಾ ಕಲಿಕೆಗೆಂದು ದಳವಾಯಿ ಡಿ. ಬನುಮಯ್ಯ ಜೆಎಸ್ಎಸ್ ಮರಿಮಲ್ಲಪ್ಪ ಮೊದಲಾದ ಶಾಲೆಗಳಿಗೂ ಹೋಗುತ್ತಾರೆ. ‘ಆಗಮ’ (ಆಗಮ ಪ್ರವರ ಆಗಮ ಪ್ರವೀಣ) ಕಲಿಯಲೆಂದೇ ವಾರ್ಷಿಕ ಸರಾಸರಿ 150ರಿಂದ 200 ಮಂದಿ ಇರುತ್ತಾರೆ.

ಹುದ್ದೆಗಳೂ ಖಾಲಿ!

ಈ ಪಾಠಶಾಲೆಗೆ 52 ಹುದ್ದೆಗಳು ಮಂಜೂರಾಗಿದ್ದು 36 ಹುದ್ದೆಗಳನ್ನು 30 ವರ್ಷಗಳಿಂದಲೂ ಭರ್ತಿ ಮಾಡಿಲ್ಲ. 1997ರಲ್ಲಿ 26 ಮಂದಿ ನೇಮಕಾತಿ ಮಾಡಲಾಯಿತು. ಬಳಿಕ ಆ ಪ್ರಕ್ರಿಯೆ ಆಗಿಲ್ಲ. ಬೋಧಕ–ಬೋಧಕೇತರ ಸಿಬ್ಬಂದಿ ಕಚೇರಿ ಸಿಬ್ಬಂದಿ ಕ್ಲರ್ಕ್ ಗ್ರೂಪ್ ಡಿ ತೋಟದ ಮಾಲಿ ಸ್ವಚ್ಛತಾಗಾರ ಮೊದಲಾದ ಹುದ್ದೆಗಳು ಖಾಲಿ ಇವೆ. ಕಾಯಂ ಸಿಬ್ಬಂದಿ ಇರುವುದು 8 ಮಂದಿ ಮಾತ್ರ. ಅತಿಥಿ ಶಿಕ್ಷಕರ ಮೂಲಕ (33 ಮಂದಿ) ನಿರ್ವಹಣೆ ಮಾಡಲಾಗುತ್ತಿದೆ. ಶಾಲೆಯ ಹಾಸ್ಟೆಲ್ಗೆ ನಿಲಯಪಾಲಕ ಸೆಕ್ಯುರಿಟಿ ಹಾಗೂ ರಾತ್ರಿ ವೇಳೆ ಭದ್ರತೆಗೆ ವಾಚ್ಮನ್ ನೇಮವಾಗಿಲ್ಲ.

ಈ ಪಾರಂಪರಿಕ ಕಟ್ಟಡವನ್ನು ಉತ್ತಮವಾಗಿ ದುರಸ್ತಿಪಡಿಸಿದರೆ ಸುರಕ್ಷತೆಯ ದೃಷ್ಟಿಯಿಂದ ಎದುರಾಗಿರುವ ಆತಂಕ ದೂರಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆದಿರುವೆ.
- ಪಿ.ಸತ್ಯನಾರಾಯಣ, ಪ್ರಾಂಶುಪಾಲ, ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು

ಮೈಸೂರಿನ ಸಂಸ್ಕೃತ ಪಾಠಶಾಲೆ ಕಟ್ಟಡದ ದುರಸ್ತಿ ಆಗಬೇಕಿರುವುದು ಗಮನಕ್ಕೆ ಬಂದಿದೆ. ಅಂದಾಜುಪಟ್ಟಿ ಪರಿಶೀಲಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವೆ.
- ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.