ಮೈಸೂರು: ವರುಣ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸುತ್ತಿರುವುದನ್ನು ಖಂಡಿಸಿ ರೈತರು ಪ್ರತಿಭಟಿಸಿದರು.

‘ವರುಣ ಹೋಬಳಿ ಹುನಗನಹಳ್ಳಿ ರಸ್ತೆಯಲ್ಲಿರುವ ಹಾರೋಹಳ್ಳಿ ಸ. ನಂ 791 ರಲ್ಲಿ 145 ಎಕರೆ ಸರ್ಕಾರಿ ಜಮೀನು ಇದ್ದು, ಅದನ್ನು ದುರಸ್ತಿ ಮಾಡದೆ ವ್ಯಕ್ತಿಯೊಬ್ಬರಿಗೆ 10 ಎಕರೆ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅದಕ್ಕಾಗಿ ಅಲ್ಲಿರುವ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಅಹಿಂದ ಜವರಪ್ಪ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮಸ್ಥರು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಈ ಜಮೀನಿನಲ್ಲಿ ಕಳೆದ 70 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದೇವೆ. ನಮ್ಮನ್ನು ಒಕ್ಕಲೆಬ್ಬಿಸಬೇಡಿ. ಸರ್ವೇ ಮಾಡಲು ನಾವು ಬಿಡುವುದಿಲ್ಲ’ ಎಂದು ಪಟ್ಟುಹಿಡಿದರು.

‘ಲೋಕಾಯುಕ್ತದ ಆದೇಶ ಆಧರಿಸಿ ಸರ್ವೆ ಮಾಡುತ್ತಿದ್ದೇವೆ’ ಎಂದು ಹೆಚ್ಚುವರಿ ತಹಶೀಲ್ದಾರ್ ವಿಶ್ವನಾಥ್ ಹೇಳಿದರು. ಲೋಕಾಯುಕ್ತದ ಆದೇಶ ತೋರಿಸುವಂತೆ ರೈತರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಕ್ರೋಶ ವ್ಯಕ್ತಪಡಿಸಿದರು.

ರೈತರ ವಿರೋಧದ ನಡುವೆ ಪೊಲೀಸರ ಸಹಕಾರದಲ್ಲಿ ಸರ್ವೆ ನಡೆಯಿತು. ಮುಖ್ಯಮಂತ್ರಿಗಳ ಮನೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ರೈತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಹಿಂದ ಜವರಪ್ಪ ಮಾತನಾಡಿ, ‘ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಸ್ವಾಮಿ ಅವರಿಗೆ ಸರ್ವೇ ನಂ. 751 (ಹೊಸ ಸ.ನಂ. 87) ರಲ್ಲಿ 10 ಎಕರೆ ಜಮೀನು ಮಂಜೂರಾಗಿದೆ. ಆದರೆ, ಅವರು 75 ವರ್ಷಗಳಿಂದ ಸ್ವಾಧೀನದಲ್ಲಿ ಇಲ್ಲ. ಅಧಿಕಾರಿಗಳು ಲೋಕಾಯುಕ್ತ ನೆಪ ಮಾಡಿಕೊಂಡು ಒತ್ತುವರಿ ತೆರವು ಮಾಡಲು ಮುಂದಾಗಿರುವುದು ಖಂಡನೀಯ’ ಎಂದರು.

‘ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಪ್ಪು ಮಾಹಿತಿ ಕೊಟ್ಟು ಲೋಕಾಯುಕ್ತರು ಮೌಖಿಕ ಆದೇಶ ಕೊಟ್ಟಿದ್ದಾರೆ ಎಂದು ತಿಳಿಸಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಒತ್ತುವರಿ ಬಗ್ಗೆ ನೋಟಿಸ್ ಕೊಟ್ಟಿಲ್ಲ. ಕೆಲವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜಿಲ್ಲಾಡಳಿತ ಕಾನೂನು ಬದ್ಧವಾಗಿ ಚರ್ಚೆ ಮಾಡಿ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

‘ಈ ಜಮೀನಿನಲ್ಲಿ 70 ವರ್ಷಗಳಿಂದ ಉಳುಮೆ ಮಾಡುತ್ತಿದ್ದು, ಎಲ್ಲರಿಗೂ ಹಕ್ಕುಪತ್ರ ಕೊಟ್ಟಿದ್ದಾರೆ. ಎಸಿಗೆ ಮೇಲ್ಮನವಿ ಸಲ್ಲಿಸಿದ್ದೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ಗ್ರಾಮದ ಗವಿಸಿದ್ದು ಎಚ್ಚರಿಸಿದರು.

ರೈತ ಸಂಘದ ಬನ್ನೂರು ನಾರಾಯಣ, ಆನಂದ್, ಮಾದೇಗೌಡ, ಗ್ರಾಮಾಂತರ ಡಿವೈಎಸ್ಪಿ ರಾಜಣ್ಣ, ಸರ್ಕಲ್ ಇನ್ಸ್ಪೆಕ್ಟರ್ ಶಿವಾನಂದ ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಸದಾಶಿವ ತಿಪ್ಪರೆಡ್ಡಿ, ಹೆಚ್ಚುವರಿ ತಹಸಿಲ್ದಾರ್ ವಿಶ್ವನಾಥ್, ಉಪ ತಹಸಿಲ್ದಾರ್ ಲತಾ, ಕಂದಾಯಾಧಿಕಾರಿ ಯೋಗೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.