ಮೈಸೂರು: ಜೀವವೈವಿಧ್ಯದ ತಾಣವನ್ನು ಸ್ಮಶಾನವಾಗಿಸಿದ ಕಥೆಯಿದು. ಒಂದು ಕಾಲದಲ್ಲಿ ಗ್ರಾಮದ ಉಸಿರಾಗಿದ್ದ ಕೆರೆಯಲ್ಲಿ ಕಾಣುವುದು ಕಟ್ಟಡ ತ್ಯಾಜ್ಯ. ಕಾಡುಗಳನ್ನು ರಸ್ತೆಗಳು ಸೀಳುವಂತೆಯೇ ಕೆರೆಯ ಜೀವವನ್ನು ಇಲ್ಲಿ ರಸ್ತೆಗಳೇ ಕೊಯ್ದಿವೆ. ಕಲ್ಲು, ಇಟ್ಟಿಗೆ ಸುರಿದು ಉಸಿರುಗಟ್ಟಿಸಿ ಕೊಲ್ಲಲಾಗುತ್ತಿದೆ.

ಹಿನಕಲ್ ಗ್ರಾಮದ ದಕ್ಷಿಣ ಭಾಗದಲ್ಲಿರುವ ‘ಹಿನಕಲ್ ರಾಯನ ಕೆರೆ’ ವಿಜಯನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಕಟ್ಟಡ ತ್ಯಾಜ್ಯಗಳ ಸುರಿವ ತಾಣವಾಗಿ ಬದಲಾಗಿದೆ. ಪ್ಲಾಸ್ಟಿಕ್, ವೈದ್ಯಕೀಯ, ಮಾಂಸದಂಗಡಿ ತ್ಯಾಜ್ಯ, ಕೊಳಚೆ ನೀರು ಶೇಖರವಾಗುತ್ತಿದೆ. ಇಲ್ಲಿ ಬಂದವರು ಮೂಗು ಮುಚ್ಚಿಕೊಂಡು ಓಡಾಡಬೇಕು.

ಸರ್ಕಾರದ ಭೂ ದಾಖಲೆ ಹಾಗೂ ನಕ್ಷೆಯ ಮಾಹಿತಿ ತೋರುವ ‘ದಿಶಾಂಕ್’ ಆ್ಯಪ್ನಲ್ಲಿ ಕೆರೆಯದ್ದು 5.9 ಎಕರೆ ವಿಸ್ತೀರ್ಣ ಎಂಬ ಉಲ್ಲೇಖವಿದೆ. ‘ನೀಲಿ ಬಣ್ಣ’ದಲ್ಲಿ ಸೂಚಿಸುವುದು ಮಾತ್ರ ಕೆರೆಯು ವಿಸ್ತೀರ್ಣದ ಮೂರು ಪಟ್ಟು. ಯಾರಾದರೂ ಈ ನಕ್ಷೆ ನೋಡಿದರೆ, ಸ್ಥಳಕ್ಕೆ ಭೇಟಿ ನೀಡಿದರೆ ಕೆರೆಯ ಗಡಿ ಎಷ್ಟಿರಬಹುದು ಎಂದು ಅಂದಾಜಾಗುತ್ತದೆ.

ನಿರಂತರ ಮಾನವ ಹಸ್ತಕ್ಷೇಪಕ್ಕೆ ಒಳಗಾಗಿರುವ ಕೆರೆಯು ಕುಗ್ಗುತ್ತಾ ಸಾಗಿದ್ದು, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕೆರೆಯ ಒಡಲಿನೊಳಗೆ ರಸ್ತೆಗಳನ್ನು ಮಾಡಿ, ತ್ಯಾಜ್ಯ ಸುರಿಯಲು ಅನುಕೂಲ ಮಾಡಿಕೊಟ್ಟಿರುವುದು ಸ್ಪಷ್ಟ.

ಕೆರೆ ಮಧ್ಯೆ ರಸ್ತೆ, ಕಾಲುವೆ: ‘ಡಿ.ರಂದೀಪ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸಿಎಸ್ಆರ್ ನಿಧಿಯಡಿ ₹1.38 ಕೋಟಿ ವೆಚ್ಚದಲ್ಲಿ ಉದ್ಯಾನ, ಪಾದಚಾರಿ ಮಾರ್ಗ ಹಾಗೂ ತ್ಯಾಜ್ಯ ತೆರವಿಗೆ ಸೂಚಿಸಿದ್ದರು. ಕೆರೆ ಏರಿ ಬಳಿ ಮಾತ್ರ ನೀರು ನಿಲ್ಲುತ್ತಿದೆ. ರಾಜ ಕಾಲುವೆಯನ್ನು ಕೆರೆಯ ಮಧ್ಯೆಯೇ ಸೀಳಿ ಕಟ್ಟಲಾಗಿದ್ದು, ಕೆರೆಯನ್ನು ಇಲ್ಲವಾಗಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸುತ್ತಾರೆ ಹಿನಕಲ್ ನಿವಾಸಿ ಎಂ.ಆರ್.ಮೋಹನ್.

ರಾಜಕಾಲುವೆಯಲ್ಲಿ ನೀರೆಲ್ಲ ಬೋಗಾದಿ ಕೆರೆಗೆ ನೇರವಾಗಿ ಹೋಗುವುದರಿಂದ ವರ್ಷವೆಲ್ಲ ಒಣಗಿರುತ್ತದೆ. ಕೆರೆಯ ಉತ್ತರ ಭಾಗವು ವಸತೀಕರಣಕ್ಕಾಗಿ ಒತ್ತುವರಿಯಾಗಿದೆ. ಜೀವ ವೈವಿಧ್ಯದ ತಾಣವನ್ನು ಸ್ಮಶಾನವಾಗಿಸುವ ಕಾರ್ಯ ನಡೆಯುತ್ತಲೇ ಇದೆ. ಇನ್ನಾದರೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕೆಂಬುದು ಪರಿಸರ ಪ್ರಿಯರ ಒತ್ತಾಯ.

ಸರ್ವೆ ನಂ 282, 306, 100ರಲ್ಲಿ ಕೆರೆಯ ನೀಲಿ ಬಣ್ಣ ಕಾಣುತ್ತದೆ. 306ರ ಸ್ವಲ್ಪ ಭಾಗವನ್ನು ಗ್ರಾಮಸ್ಥರ ಸ್ಮಶಾನಕ್ಕೆ ಮುಡಾ ಬಿಟ್ಟುಕೊಟ್ಟಿದೆ. ಪಾಳು ಭೂಮಿಯಾಗಿರುವ ಭಾಗವನ್ನು ಸೇರಿಸಿ ಪುನರುಜ್ಜೀವನಗೊಳಿಸಿದರೆ, ಹಸಿರು– ನೀಲಿ ವಲಯ ನಗರಕ್ಕೆ ಸಿಗಲಿದೆ. ಇಲ್ಲದಿದ್ದರೆ ಬೆಂಗಳೂರಿನಂತಾಗಲಿದೆ.

‘ಜೀವವೈವಿಧ್ಯ ಉಳಿಸುವ ತುರ್ತು’

‘ಕುಪ್ಪಯ್ಯನ ಕೆರೆ ರಾಯನಕೆರೆ ದಿವಾನರ ಕೆರೆ ಎಂಬ ವಿವಿಧ ಹೆಸರುಗಳಿಂದ ಹಿನಕಲ್ ಕೆರೆಯನ್ನು ಕರೆಯಲಾಗುತ್ತದೆ. ಕೆರೆಯ ನೀರು ನಿಲ್ಲದಂತೆ ಮಾಡಿ ಒತ್ತುವರಿ ಮಾಡಲಾಗುತ್ತಿದೆ’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘25 ವರ್ಷದ ಹಿಂದೆ ಕೆರೆಯು ತುಂಬಿತ್ತು. ಇದೀಗ ಅಲ್ಲಿ ನೀರು ನಿಲ್ಲುತ್ತಿಲ್ಲ. ಶೆಡ್ಗಳನ್ನು ನಿರ್ಮಿಸಲಾಗಿದೆ. ದೇವರಕರೆಯಂತೆಯೇ ಈ ಕೆರೆಯನ್ನೂ ಉಳಿಸಿಕೊಳ್ಳಬಹುದು. ವಲಸೆ ಹಕ್ಕಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಅವೀಗ ಕಡಿಮೆಯಾಗುತ್ತಿವೆ. ಕೂಡಲೇ ಆಡಳಿತ ವರ್ಗ ಎಚ್ಚೆತ್ತುಕೊಂಡು ಉಳಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.