ಪಿರಿಯಾಪಟ್ಟಣ: ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿಜಯ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋಧಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆಂತರಿಕ ಒಪ್ಪಂದದಂತೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕಾರಣ ಚುನಾವಣೆ ನಡೆಯಿತು. ಪಂಚಾಯಿತಿಯಲ್ಲಿ 18 ಸದಸ್ಯರಿದ್ದು, ತೆರವಾದ ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ವನಜಾಕ್ಷಮ್ಮ, ವರನಂದಿ, ಅನಿಲ್ ಕುಮಾರ್, ಕಾಮರಾಜು, ಸುಧಾ, ಮಹದೇವ, ಮೀನಾಕ್ಷಿ, ಕುಮಾರ, ರವಿಕುಮಾರ್, ಮಹದೇವ, ಶಿವಕುಮಾರ್, ಸರೋಜಾ, ಛಾಯಾಮಣಿ, ಮಂಜುನಾಯ್ಕ, ಸುಮಾ ಭಾಗವಹಿಸಿದ್ದರು.

ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಈರಯ್ಯ, ಕೆಡಿಪಿ ಸದಸ್ಯ ಮಹದೇವ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ನಿರ್ದೇಶಕ ರವಿ, ಮುಖಂಡರಾದ ಚಪ್ಪರದಳ್ಳಿ ರವಿ, ಶಿವಣ್ಣ ಭೂತನಳ್ಳಿ, ಪಿ.ಪಿ.ಮಹದೇವ್, ಪುಟ್ಟಯ್ಯ, ಶಿವಶಂಕರ್, ಹುಣಸೂರು ಡಿ.ಕುಮಾರ್, ಪಂಚೆ ನಾಗಣ್ಣ, ಪರಮೇಶ್, ಜಯಸ್ವಾಮಿ, ನರಸಿಂಹ ಮೂರ್ತಿ, ಬಸವರಾಜ್, ಅಣ್ಣಯ್ಯ, ನಾಗೇಗೌಡ, ಸಣ್ಣ ತಮ್ಮಯ್ಯ, ಸಿದ್ದರಾಮೇಗೌಡ, ವೀರಭದ್ರ ಸ್ವಾಮಿ, ಆರ್.ಸಿ.ಚಂದ್ರು, ನಾರಾಯಣ, ಸಣ್ಣಪ್ಪ ಗಿರಿಗೂರು, ಮಹದೇವ್ ಬೇಗೂರು, ಜಯಸ್ವಾಮಿ, ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.