ಹುಣಸೂರು ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಂತ್ರಣಕ್ಕೆ ತ್ಯಾಜ್ಯ ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರ ಕಲಾಕೃತಿಗಳನ್ನು ಅರಳಿಸಿರುವ ದೃಶ್ಯ
ಜಾಗೃತಿ ಅಭಿಯಾನಕ್ಕೆ ವಿಶೇಷ ಅನುದಾನ ಬಳಸಿಕೊಳ್ಳದೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಬಣ್ಣಗಳನ್ನು ಪಡೆದು ಚಿತ್ರ ಕಲೆ ಬಿಡಿಸಲಾಗುತ್ತಿದೆ. 5 ತಿಂಗಳಿಂದ ನಿರಂತರವಾಗಿ ನಡೆದಿದ್ದು ಸ್ವಚ್ಛತಾ ಕಾರ್ಯಕ್ಕೆ ಉಪಯುಕ್ತವಾಗಿದೆ
ಸೌಮ್ಯ ನಗರಸಭೆ ಪರಿಸರ ಎಂಜಿನಿಯರ್
‘ಪೌರಕಾರ್ಮಿನೇ ಕಲಾವಿದ’
ಅಭಿಯಾನದ ಭಾಗವಾಗಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯಿಂದ ಎದುರಾಗುವ ಸಮಸ್ಯೆ ಕುರಿತ ಜಾಗೃತಿ ಚಿತ್ರವನ್ನು ಗೋಡೆ ಟೈಯರ್‌ಗಳ ಮೇಲೆ ಬರೆಯುತ್ತಿರುವುದು ಪೌರಕಾರ್ಮಿಕ ಚಿತ್ರ ಕಲಾವಿದ ಸುರೇಶ್. ‘ಈ ಕೆಲಸಕ್ಕೆ ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಪೌರಕಾರ್ಮಿಕ ವೃತ್ತಿಗೆ ನೀಡುವ ವೇತನ ಪಡೆದು ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವೆ’ ಎಂದು ತಿಳಿಸಿದರು.. ‘ನೈರ್ಮಲ್ಯತೆ ಕಾದುಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ನಿಗದಿತ ಸ್ಥಳದಲ್ಲಿ ಕಸ ವಿಲೇವಾರಿ ಮಾಡುವುದರಿಂದ ನಗರ ಸುಂದರವಾಗಲಿದೆ’ ಎಂದು ತಾಲ್ಲೂಕು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪುರುಶೋತ್ತಮ್.