ಎಚ್.ಡಿ.ಕೋಟೆ: ರಾಜ್ಯ ಹೆದ್ದಾರಿ ರಸ್ತೆಯ ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಖಾಸಗಿ ಹೋಟೆಲ್ ಕಟ್ಟಡ ನಿರ್ಮಿಸಿ ರಸ್ತೆ ಸವಾರರಿಗೆ ತೀವ್ರ ಅಡಚಣೆ ಉಂಟಾಗಿದೆ ಎಂದು ಕಂಚಮಳ್ಳಿ ಗ್ರಾಮದ ಮುಖಂಡ ನಂದೀಶ್ ಮಾಧ್ಯಮದೆದುರು ಆರೋಪಿಸಿದ್ದಾರೆ.

ತಾಲ್ಲೂಕಿನ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯ ಮೈಸೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ ಗಡಿ ಭಾಗದ ಸ್ವಾಗತ ಕಮಾನಿನ ಬಳಿ ಕಂಚಮಹಳ್ಳಿ- ಮಂಡನಹಳ್ಳಿ ಗ್ರಾಮದ ನಡುವೆ ಇರುವ ಹೋಟೆಲ್ ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ಇಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ರಾಜ್ಯ ಹೆದ್ದಾರಿ ರಸ್ತೆ ಆಗಿರುವುದರಿಂದ ಪ್ರತಿನಿತ್ಯ ಮೈಸೂರಿನಿಂದ ಕೇರಳ ರಾಜ್ಯಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಈಗಾಗಲೇ ರಸ್ತೆ ತುಂಬಾ ಕಿರಿದಾಗಿದೆ. ಹಲವಾರು ಸಂದರ್ಭದಲ್ಲಿ ಈ ಸ್ಥಳದ ಬಳಿ ಅಪಘಾತಗಳು ಸಂಭವಿಸಿ ಸಾವುನೋವು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.

‘ರಸ್ತೆಯಲ್ಲಿ ಕಟ್ಟಡ ಕಟ್ಟಿರುವುದರಿಂದ ಎದುರಿಗೆ ಬರುವ ವಾಹನಗಳು ಸರಿಯಾಗಿ ಕಾಣುತ್ತಿಲ್ಲ. ಈಗಾಗಿ ಅಪಘಾತ ಸಂಭವಿಸುತ್ತಿವೆ. ಹೋಟೆಲ್ ಕಟ್ಟಿರುವ ಜಾಗವು ಮೈಸೂರು ತಾಲ್ಲೂಕಿನ ವ್ಯಾಪ್ತಿಗೆ ಸೇರುವುದರಿಂದ ಅಲ್ಲಿನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಕ್ಷಣ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಅಕ್ರಮವಾಗಿ ಹೋಟೆಲ್ ನಿರ್ಮಾಣ ಮಾಡಿರುವ ಜಾಗವನ್ನು ತೆರವುಗೊಳಿಸದೆ ಇದ್ದರೆ ಹೆದ್ದಾರಿ ರಸ್ತೆಯಲ್ಲಿ ಕುಳಿತು ಹೋರಾಟ ಮಾಡಬೇಕಾಗುತ್ತದೆ’ ಎಂದು ಡಿಎಸ್ಎಸ್ ಮುಖಂಡ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಆಗುವಂತೆ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ತೆರವು ಗೊಳಿಸಬೇಕು ಎಂದು ಮುಖಂಡ ಭೀಮ ರಾಜ್ ಆಗ್ರಹಿಸಿದರು.

ಮೈಸೂರು–ಮಾನಂದವಾಡಿ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿ ಹೋಟೆಲ್ ನಿರ್ಮಾಣ ಮಾಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಕಟ್ಟಡವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ
ಚನ್ನಪ್ಪ, ಎಇ ಲೋಕೋಪಯೋಗಿ ಇಲಾಖೆ, ಮೈಸೂರು ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.