ಮೈಸೂರು: ‘ಜಿಲ್ಲೆ ಹಾಗೂ ರಾಜ್ಯ ಪ್ರಶಸ್ತಿಗೆ ಅರ್ಜಿ ಹಾಕಿ ಪಡೆಯುವ ವ್ಯವಸ್ಥೆ ಇರಬಾರದು. ಅದು ನಾಚಿಕೆಗೇಡು. ಸರ್ಕಾರದ ಇಲಾಖೆಗಳು ಕಲಾವಿದನ ಸಾಧನೆಯನ್ನು ಗುರುತಿಸಿ ಆತನ ಮನೆ ಬಾಗಿಲಿಗೆ ತೆರಳಿ ಪ್ರಶಸ್ತಿಯ ಬಗ್ಗೆ ತಿಳಿಸಿದಾಗ ಕಲೆಯ ಗೌರವವೂ ಹೆಚ್ಚುತ್ತದೆ’ ಎಂದು ಮಾಜಿ ಸಚಿವ ಎಂ.ಕೋಟೆ ಶಿವಣ್ಣ ಪ್ರತಿಪಾದಿಸಿದರು.

ಕನ್ನಡ ಜಾನಪದ ಪರಿಷತ್ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘವು ಇಎಂಆರ್ಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಮಾತನಾಡಿದರು.

‘ನಮ್ಮ ಹುಟ್ಟಿನಿಂದಲೇ ಜಾನಪದದ ಸೊಗಡನ್ನು ಅನುಭವಿಸಿದ್ದೇವೆ. ಜೀವನದ ಪ್ರತಿಯೊಂದು ಕ್ಷಣದಲ್ಲೂ ಅದು ನಮ್ಮ ಜೊತೆಗೇ ಇರುತ್ತದೆ. ಶುಭ ಸಮಾರಂಭದ ಸೋಬಾನೆ ಹಾಡುಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸುತ್ತವೆ. ಅವಿದ್ಯಾವಂತರನ್ನೂ ಜಾನಪದ ವಿದ್ಯಾವಂತರಷ್ಟೇ ಸಮಾನವಾಗಿ ಬೆಳೆಸಿದ ಉದಾಹರಣೆ ಇದೆ’ ಎಂದರು.

‘ಜಾನಪದ ಕಲೆಯನ್ನು ಬೆಳೆಸದಿದ್ದರೆ ಭಾರತೀಯ ಸಂಸ್ಕೃತಿ ಅಳಿದು ಹೋಗುತ್ತದೆ. ಸರ್ಕಾರವು ಈ ಕಲೆಗೆ ಆದ್ಯತೆ ನೀಡದಿರುವುದು ವಿಷಾದನೀಯ. ಗ್ರಾಮೀಣ ಭಾಗದ ಮುಗ್ಧ ಮನಸ್ಸಿನ ಕಲಾವಿದರಿಂದ ಜಾನಪದ ಸಂಸ್ಕೃತಿ ಉಳಿದಿದೆ. ಬಿಪಿ, ಶುಗರ್ ಏರಿಸುವ ಪಾಶ್ಚಿಮಾತ್ಯ ಸಂಗೀತದ ಹಾವಳಿಯ ನಡುವೆ ಮನಸ್ಸಿಗೆ ಹಿತ ನೀಡುವ ಜನಪದ ಹಾಡುಗಳನ್ನು ಬೆಳೆಸೋಣ’ ಎಂದು ಸಲಹೆ ನೀಡಿದರು.

‘ರಾಜ್ಯದ ಜಾನಪದ ಸೊಗಡನ್ನು ಪರಿಚಯಿಸುವ ಇನ್ನೊಂದು ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ಆಯೋಜಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಮಾಡಬೇಕು’ ಎಂದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಎಚ್.ಪ್ರಕಾಶ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಎಂ.ರಾಮಪ್ಪ, ಜಿಲ್ಲಾ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಉಮೇಶ್, ಮೈಸೂರು ಕೋ– ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಆರ್.ರವಿಕುಮಾರ್, ಜಾನಪದ ಕಲಾವಿದೆ ಎಸ್.ಜಿ.ಲಕ್ಷ್ಮಿದೇವಮ್ಮ, ಕನ್ನಡ ಜಾನಪದ ಪರಿಷತ್ನ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್ ಇದ್ದರು.

ಜಾನಪದ ಪ್ರಪಂಚ ಪ್ರಶಸ್ತಿ ವಿತರಣೆ

ಧರ್ಮಾಪುರ ಎಂ.ಎಸ್. ಕುಮಾರ ಹುಣಸೂರು ಸಿಂಗೇಶ್ ಮೈಸೂರಿನ ಗೀತಾ ಶ್ರೀಧರ್ ಕಳಲೆ ಜವರನಾಯಕ ಕೆ.ಆರ್. ನಗರದ ಸೈಯದ್ ರಿಜ್ವಾನ್ ಶಿರಮಳ್ಳಿಯ ಎಸ್.ಬಿ. ನಾಗೇಗೌಡ ಸಜ್ಜೆಹುಂಡಿಯ ತಿರುಮಲೇಗೌಡ ಬೆಟ್ಟದತುಂಗದ ಗಂಗಮ್ಮ ಮಲಾರದ ಮಹದೇವಯ್ಯ ಕ್ಯಾತನಹಳ್ಳಿಯ ಸಣ್ಣಮ್ಮ ಅವರಿಗೆ ಜಿಲ್ಲಾ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಡಪ್ಪನಹಳ್ಳಿಯ ಲಕ್ಷ್ಮೀರಾಂ ಮೈಸೂರಿನ ಎಸ್. ಜೋಸೆಫ್ ಕನಕಗಿರಿಯ ಕಂಸಾಳೆ ರವಿ ಯರಗನಹಳ್ಳಿಯ ಜಿ.ಶ್ರೀಧರ್ ಕೆ.ಎಂ.ಶ್ರುತಿ ತಲಕಾಡು ಕೃಷ್ಣಮೂರ್ತಿ ಪಿ. ಪುನೀತ್ ಕುಮಾರ್ ಕೆ.ಎಂ. ಶೇಷಣ್ಣಸ್ವಾಮಿ ಮಾರಶೆಟ್ಟಿಹಳ್ಳಿಯ ಮಹೇಶ ಅವರಿಗೆ ಜಿಲ್ಲಾ ಯುವ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.