ಮೈಸೂರು: ಜಿಲ್ಲೆಯ ಜೆಡಿಎಸ್ ಮುಖಂಡರು ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ದಟ್ಟಗಳ್ಳಿ ಸಮೀಪದ ಸಾರಾ ಚೌಟ್ರಿ ಮುಂಭಾಗದಿಂದ ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ದರ್ಶನ ಪಡೆದರು.

ಸೋಮವಾರ ಪ್ರಯಾಣಕ್ಕೂ ಮುನ್ನ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಮಾತನಾಡಿ, ‘ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಕುಟುಂಬದ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ’ ಎಂದು ದೂರಿದರು.

ಇಲವಾಲದ ಬಳಿ ಮಂಡ್ಯದಿಂದ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಹೊರಟ ಕಾರುಗಳೂ ಸೇರಿಕೊಂಡವು. ಮೈಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತಿ.ನರಸೀಪುರದಿಂದಲೂ ಅನೇಕ ಮುಖಂಡರು ಭಾಗವಹಿಸಿದರು.

ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಮುಖಂಡರಾದ ಕೃಷ್ಣನಾಯಕ, ಕೆ.ಮಹದೇವ್, ಅಮಿತ್ ದೇವರಹಟ್ಟಿ, ಚಿನ್ನಿ ರವಿ, ಲಿಂಗಪ್ಪ, ಬೆಳವಾಡಿ ಶಿವಮೂರ್ತಿ, ಕ್ಯಾತನಹಳ್ಳಿ ಶಿವಶಂಕರ ಗೌಡ, ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.