ಕಲಾವಿದರೊಬ್ಬರು ಚಾಮುಂಡೇಶ್ವರಿ ದೇವಿಯ ಕಲಾಕೃತಿಗೆ ಭಾನುವಾರ ಅಂತಿಮ ಸ್ಪರ್ಶ ನೀಡಿದರು
ಮಂಜುಪ್ರಸಾದ್
ಎ.ದೇವರಾಜು
ಕಾವಾ’ ಕಲಾಕೃತಿಗಳಿಂದ ತುಂಬಬೇಕು. ಮ್ಯೂಸಿಯಂನಂತೆ ಆಗಬೇಕು ಎಂಬುದು ಕನಸು. ಅದಕ್ಕೆ ಹಿರಿಯ ವಿದ್ಯಾರ್ಥಿಗಳು ಜೊತೆಯಾಗಿದ್ದೇವೆ
ಆರ್.ಎಚ್.ಮಂಜು ಪ್ರಸಾದ್ ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ
ಎಲ್ಲ ಕಲೆಗಳ ಪರಿಚಯವನ್ನು ಈ ದಸರೆಯಲ್ಲಿ ಕಾವಾ ಮಾಡುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ
ಎ.ದೇವರಾಜು ಡೀನ್ ಕಾವಾ
450ಕ್ಕೂ ಹೆಚ್ಚು ಕಲಾಕೃತಿಗಳು..
‘450ಕ್ಕೂ ಹೆಚ್ಚು ಟೆರಾಕೋಟ ಕಲಾಕೃತಿಗಳು ಆ.28ರಿಂದ ಸೆ.8ರವರೆಗೆ ನಡೆದ ಕಾರ್ಯಾಗಾರದಲ್ಲಿ ಸಿದ್ಧವಾಗಿವೆ. ಅವುಗಳನ್ನು ಬೇಯಿಸಿ ಗೋಡೆಗಳಿಗೆ ಜೋಡಿಸುವ ಕೆಲಸ ಆಗಲಿದೆ. ಸುಟ್ಟ ನಂತರ 2 ‘ಡಿ’ ಮಾದರಿಯಲ್ಲಿ ಕಾಣಲಿವೆ’ ಎಂದು ಎ.ದೇವರಾಜು ತಿಳಿಸಿದರು. ‘ಸಾರ್ವಜನಿಕರಲ್ಲಿ ಕಲಾಪ್ರೀತಿ ಬೆಳೆಸುವುದಕ್ಕೆ 22ರಿಂದ ತೊಗಲುಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನ ನಡೆಯಲಿದ್ದು ಸೆ.26ರಂದು ರಾಷ್ಟ್ರೀಯ ಕರಕುಶಲ ವಸ್ತು ಲಲಿತಕಲಾ ಪ್ರದರ್ಶನ ಹಾಗೂ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು ಜೇಡಿ ಮಣ್ಣಿನಿಂದ ಕಲಾಕೃತಿಗಳನ್ನು ಮಾಡಲಿದ್ದಾರೆ. ಚರ್ಮದ ಬೊಂಬೆಗಳನ್ನು ಇಟ್ಟುಕೊಂಡು ಗೋಡೆಯ ಮೇಲೆ ಅವರಿಂದ ಭಿತ್ತಿಚಿತ್ರ ಬರೆಸಲಾಗುತ್ತದೆ. 28ರಂದು ಕಲಾ ಜಾತ್ರೆಯ ಉದ್ಘಾಟನೆ ಜೊತೆಗೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ’ ಎಂದರು.