ಮೈಸೂರು: ಇಲ್ಲಿನ ಹುಣಸೂರು ರಸ್ತೆಯಲ್ಲಿರುವ ‘ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರ’ಗಳಾದ ಕರ್ನಾಟಕ ಕಲಾಮಂದಿರ, ರಂಗಾಯಣ ಹಾಗೂ ವಿಶ್ವ ಕನ್ನಡ ಸಮ್ಮೇಳನ ಅತಿಥಿಗೃಹಗಳ ಸಮಗ್ರ ನವೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಸರ್ಕಾರ ₹ 14.63 ಕೋಟಿ ಅನುದಾನ ಒದಗಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾಮಗಾರಿ ನಡೆಯಲಿದ್ದು, ಈಚೆಗೆ ಇಲ್ಲಿ ನಡೆದ ಸರ್ಕಾರದ ಎರಡು ವರ್ಷಗಳ ‘ಸಾಧನಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನಾಡಹಬ್ಬದ ದಸರಾ ಮಹೋತ್ಸವ ಮುಗಿದ ನಂತರ ನವೀಕರಣ ಕಾಮಗಾರಿ ನಡೆಯಲಿದ್ದು, ಮುಂದಿನ ವರ್ಷದಲ್ಲಿ ಹೊಸ ರೂಪದ ಕಲಾಮಂದಿರ ಸಜ್ಜುಗೊಳ್ಳುವ ನಿರೀಕ್ಷೆ ಇದೆ.

ಕಲಾಮಂದಿರ ನಿರ್ಮಾಣವಾಗಿ ಹಲವು ದಶಕಗಳೇ ಕಳೆದಿವೆ. ಆಗಿನಿಂದಲೂ ಸಣ್ಣಪುಟ್ಟ ದುರಸ್ತಿ ಕೆಲಸಗಳು ಹಾಗೂ ವಾರ್ಷಿಕ ನಿರ್ವಹಣೆಯಷ್ಟೆ ನಡೆದಿದೆ. ದೊಡ್ಡ ಮಟ್ಟದಲ್ಲಿ ನವೀಕರಣ ಕಾಮಗಾರಿ ನಡೆದಿಲ್ಲ. ಇದರಿಂದಾಗಿ, ಅಲ್ಲಲ್ಲಿ ಸೋರಿಕೆ ಕಂಡುಬರುತ್ತಿದೆ. ಆಸನಗಳು ಹಾಳಾಗಿವೆ. ಧ್ವನಿವರ್ಧಕ ವ್ಯವಸ್ಥೆಯೂ ಮೇಲ್ದರ್ಜೆಗೇರಿಲ್ಲ. ಅಂತೆಯೇ, ರಂಗಾಯಣದ ಶ್ರೀರಂಗ ವೇದಿಕೆ ಹಾಗೂ ಲಂಕೇಶ್ ಸಭಾಂಗಣದಲ್ಲೂ ಮಳೆಗಾಲದಲ್ಲಿ ಸೋರಿಕೆ ಕಂಡುಬರುತ್ತಿದೆ. ಇದೆಲ್ಲ ಕಾರಣದಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿ ಹಣವನ್ನೂ ಒದಗಿಸಿದೆ.

ಪ್ರಮುಖ ಕೇಂದ್ರ: ಕಲಾಮಂದಿರವು ನಗರದ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳ ತಾಣ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆಗೆ ಪ್ರಮುಖ ಇಲಾಖೆಗಳ ಕಾರ್ಯಕ್ರಮಗಳು ನಡೆಯುತ್ತವೆ. ವಿವಿಧ ಸಂಘ–ಸಂಸ್ಥೆಗಳೂ ಇದನ್ನೇ ಬಯಸುತ್ತವೆ. ಆದ್ದರಿಂದ, ವರ್ಷದಲ್ಲಿ ಹಲವು ದಿನಗಳು ಸಕ್ರಿಯವಾಗಿರುವ ಮಂದಿರವಿದು. ಮಹನೀಯರ ಜಯಂತಿಗಳನ್ನೂ ಇಲ್ಲೇ ಆಯೋಜಿಸಲಾಗುತ್ತದೆ. ಈ ಕಾರಣದಿಂದಾಗಿ ನವೀಕರಣಗೊಳ್ಳಬೇಕಾದ ಅಗತ್ಯ ಸಾಕಷ್ಟಿದ್ದು, ಅದು ಸರ್ಕಾರಕ್ಕೆ ಮನವರಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ‘ಕಲಾಮಂದಿರವನ್ನು ಅತ್ಯಾಧುನಿಕವಾಗಿ ರೂಪಿಸುವುದು ನಮ್ಮ ಉದ್ದೇಶ. ಕೆಲವು ಹೊಸ ವ್ಯವಸ್ಥೆಯೂ ಬರಲಿದೆ. ರಂಗಾಯಣದ ಶ್ರೀರಂಗ ವೇದಿಕೆಗೆ ಹೊಸ ರೂಪ ದೊರೆಯಲಿದೆ. ಸಮಗ್ರ ನವೀಕರಣದೊಂದಿಗೆ ಕಲಾಮಂದಿರದಲ್ಲಿ ಲಿಫ್ಟ್ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಕಲಾಮಂದಿರ ಪ್ರವೇಶ ದ್ವಾರದಲ್ಲಿರುವ ಗಾಜುಗಳಿಗೆ ಟೀಕ್ ಮರದ ಫ್ರೇಮ್ ಅಳವಡಿಸಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುವುದು. ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಕೆಲಸವೂ ಆಗಲಿದೆ’ ಎನ್ನುತ್ತಾರೆ ಅವರು.

‘ವಸತಿ ಗೃಹಗಳನ್ನು ರಂಗಾಯಣದ ರೆಪರ್ಟರಿ ಕಲಾವಿದರು ಹಾಗೂ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇಲಾಖೆಯ ಸುಪರ್ದಿಯಲ್ಲಿರುವ ಮನೆಗಳಲ್ಲಿ 6 ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಎಲ್ಲವನ್ನೂ ನವೀಕರಿಸಿ ಬಳಕೆಗೆ ಒದಗಿಸಲಾಗುವುದು. ಅತಿಥಿಗಳು ಬಂದಾಗ ತಂಗಲು ಅನುವಾಗುವಂತೆ ದುರಸ್ತಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ದಸರಾ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ರಂಗಾಯಣ, ಕಲಾಮಂದಿರ, ಕಿರುರಂಗಮಂದಿರ ಬಳಸಲಾಗುತ್ತದೆ. ಆದ್ದರಿಂದ ಉತ್ಸವ ಮುಗಿದ ಬಳಿಕ ನವೀಕರಣ ಕಾಮಗಾರಿ ಆರಂಭಕ್ಕೆ ಇಲಾಖೆ ಯೋಜಿಸಿದೆ.

ಏನೇನು ಕಾಮಗಾರಿಗಳು?

ಕಲಾಮಂದಿರ: ವೇದಿಕೆಯ ಮರದ ನೆಲಹಾಸು ಬದಲಾವಣೆ. ಗ್ರೀನ್ ರೂಂ ಹಾಗೂ ಸಾರ್ವಜನಿಕ ಶೌಚಾಲಯಗಳ ನವೀಕರಣ. ಅವುಗಳಿಗೆ ಸೆನ್ಸಾರ್ ಆಧರಿತ ನಲ್ಲಿಗಳ ಅಳವಡಿಕೆ. ಒಟ್ಟು 1280 ಕುರ್ಚಿಗಳಿದ್ದು ಅವುಗಳ ಬದಲಾವಣೆ. ಅಕಾಸ್ಟಿಕ್ ವಾಲ್ಪ್ಯಾನಲಿಂಗ್ ಮೇಲ್ದರ್ಜೆಗೇರಿಸುವುದು. ಮೊದಲ ಮಹಡಿಗೆ ಲಿಫ್ಟ್ ಅಳವಡಿಕೆ. ದೊಡ್ಡ ಪ್ರಮಾಣದಲ್ಲಿ ಕಟ್ಟಡ ಸೋರುತ್ತಿದ್ದು ತಡೆಗಾಗಿ ಚಾವಣಿಯಲ್ಲಿ ದುರಸ್ತಿ ಕಾರ್ಯ. ನೆಲದ ಪಾಲಿಷಿಂಗ್. ಒಳಾವರಣ ಹಾಗೂ ಹೊರಾವರಣಕ್ಕೆ ಬಣ್ಣ. ಕಲಾಪ್ರದರ್ಶನಗಳು ನಡೆಯುವ ಸುಚಿತ್ರಾ ಕಲಾ ಗ್ಯಾಲರಿಯ ನವೀಕರಣ. ಪುಸ್ತಕ ಮಳಿಗೆಯ ಪಕ್ಕದಲ್ಲೊಂದು ಹೊಸದಾಗಿ ಮೀಟಿಂಗ್ ಹಾಲ್ ನಿರ್ಮಾಣ. ಪುಸ್ತಕ ಮಳಿಗೆಯ ನವೀಕರಣ. ಕಲಾಮಂದಿರದ ಇಡೀ ಪ್ಲಂಬಿಂಗ್ ಲೈನ್ ಹೊಸದಾಗಿ ನಿರ್ಮಾಣ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ (ಎಸಿ) ದುರಸ್ತಿ.

ಕಿರುರಂಗಮಂದಿರ: ವಾಲ್ ಪ್ಯಾನಲಿಂಗ್ ಹಾಗೂ ಶೌಚಾಲಯಗಳ ನವೀಕರಣ.

- ಶ್ರೀರಂಗಕ್ಕೆ ಹೊಸ ‘ಹೊಳಪು

’ * ರಂಗಾಯಣ: ಶ್ರೀರಂಗ ವೇದಿಕೆಯನ್ನು 100 ಆಸನಗಳ ಇಂಟಿಮೇಟ್ ಥಿಯೇಟರ್ ಆಗಿ ನವೀಕರಿಸುವುದು. ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥೀಗಳಿಗೆ ಶಾಲೆ ನಡೆಯುವ ಘಟಕ ಗ್ರಂಥಾಲಯ ಲಂಕೇಶ್ ಹಾಲ್ ಹಾಗೂ ಆಡಳಿತ ಕಚೇರಿಯ ವ್ಯವಸ್ಥೆಯ ನವೀಕರಣ.

* ಅತಿಥಿಗೃಹಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲಿ 23 ಮನೆಗಳಿದ್ದು ಅವುಗಳ ಸಮಗ್ರ ನವೀಕರಣ. ಪ್ಲಂಬಿಂಗ್ ವಿದ್ಯುತ್ ಸಂಪರ್ಕದ ದುರಸ್ತಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ. ಕಿಟಕಿಗಳ ಬದಲಾವಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.