ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಏಕದಿನ ಕ್ರಿಕೆಟ್ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ತಾರೆ ಸ್ಮೃತಿ ಮಂದಾನಗೆ ಅಗ್ರಸ್ಥಾನ ನಷ್ಟವಾಗಿದೆ.

ಸ್ಮೃತಿ ಮಂದಾನ ಅವರನ್ನು ಹಿಂದಿಕ್ಕಿರುವ ಇಂಗ್ಲೆಂಡ್ನ ನಾಯಕಿ ನ್ಯಾಟ್ ಸ್ಕಿವರ್ ಬ್ರಂಟ್ ಅಗ್ರಸ್ಥಾನಕ್ಕೇರಿದ್ದಾರೆ. ಬ್ರಂಟ್ 731 ಹಾಗೂ ಮಂದಾನ 728 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

32 ವರ್ಷದ ಬ್ರಂಟ್ 2023ರ ಬಳಿಕ ಈಗ ಮತ್ತೆ ಅಗ್ರಸ್ಥಾನ ವಶಪಡಿಸಿಕೊಂಡಿದ್ದಾರೆ.

ಭಾರತ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಬ್ರಂಟ್, ಒಟ್ಟು 160 ರನ್ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 2-1ರ ಅಂತರದ ಗೆಲುವು ದಾಖಲಿಸಿತ್ತು. ಮಂದಾನ ಒಟ್ಟು 115 ರನ್ ಗಳಿಸಿದ್ದರು.

ಮತ್ತೊಂದೆಡೆ 10 ಸ್ಥಾನಗಳ ಭರ್ಜರಿ ಬಡ್ತಿ ಪಡೆದಿರುವ ನಾಯಕಿ ಹರ್ಮನ್ಪ್ರೀತ್ ಕೌರ್, 11ನೇ ಸ್ಥಾನಕ್ಕೆ ತಲುಪಿದ್ದಾರೆ. ಜೇಮಿಮಾ ರಾಡ್ರಿಗಸ್ ಎರಡು ಸ್ಥಾನಗಳ ಬಡ್ತಿಯೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ.
.ಜಡೇಜ, ಸುಂದರ್ಗೆ ವೈಯಕ್ತಿಕ ಮೈಲಿಗಲ್ಲು ನಿರಾಕರಿಸಲು ಡ್ರಾಗೆ ಮುಂದಾದ ಸ್ಟೋಕ್ಸ್.ಇಂಗ್ಲೆಂಡ್ ಎದುರು ಅಮೋಘ ಬ್ಯಾಟಿಂಗ್: ಬ್ರಾಡ್ಮನ್, ಕೊಹ್ಲಿ ದಾಖಲೆ ಮುರಿದ ಗಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.